logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
ಅಪ್ಲೈ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಕುಕೀ ಪಾಲಿಸಿ

ಪರಿಚಯ

ನಾವು ನಿಮ್ಮ ಮಾಹಿತಿಯನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಮುಕ್ತ ಮತ್ತು ಸ್ಪಷ್ಟವಾಗಿರುವುದನ್ನು ನಂಬುತ್ತೇವೆ ಎಂದು ಈ ಕುಕೀ ಪಾಲಿಸಿ ("ಪಾಲಿಸಿ") ವಿವರಿಸುತ್ತದೆ. ಪಾರದರ್ಶಕತೆಯ ಭಾವನೆಯಲ್ಲಿ, ಈ ಪಾಲಿಸಿಯು ನಮ್ಮ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿ (ಮೊಬೈಲ್ ಮತ್ತು ಹೈಬ್ರಿಡ್, ಇನ್ನು ಮುಂದೆ "ಅಪ್ಲಿಕೇಶನ್‌ಗಳು" ಎಂದು ಉಲ್ಲೇಖಿಸಲಾಗುತ್ತದೆ) ನಾವು ಕುಕೀಸ್ ಮತ್ತು ಪಿಕ್ಸೆಲ್ಸ್, ಟ್ಯಾಗ್ಸ್, ವೆಬ್ ಬೀಕನ್‌ನಂತಹ ಟ್ರ್ಯಾಕಿಂಗ್ ತಂತ್ರಜ್ಞಾನಗಳನ್ನು (ಇನ್ನು ಮುಂದೆ ಒಟ್ಟಾರೆಯಾಗಿ "ಕುಕೀಗಳು" ಎಂದು ಕರೆಯಲಾಗುತ್ತದೆ) ಹೇಗೆ ಮತ್ತು ಯಾವಾಗ ಬಳಸುತ್ತೇವೆ ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಈ ಕುಕೀ ಪಾಲಿಸಿಯು ಈ ಪಾಲಿಸಿಗೆ ಸಂಬಂಧಿಸಿದ ಅಥವಾ ಉಲ್ಲೇಖದ ಮೂಲಕ ಸಂಯೋಜಿಸುವ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ (SCL) ನ ಯಾವುದೇ ಪ್ರಾಡಕ್ಟ್ ಅಥವಾ ಸೇವೆಗೆ ಅನ್ವಯಿಸುತ್ತದೆ.

a. SCL ಕುಕೀಗಳನ್ನು ಬಳಸುತ್ತದೆಯೇ?

ನೀವು ಯಾವುದೇ SCL ವೆಬ್‌ಸೈಟ್/ಅಪ್ಲಿಕೇಶನ್‌ಗಳನ್ನು ಬಳಸಿದಾಗ SCL ಕುಕೀಗಳನ್ನು ಬಳಸುತ್ತದೆ. ಎಲ್ಲರೂ ಸಾಧ್ಯವಾದಷ್ಟು ಉತ್ತಮ ಅನುಭವ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಬಳಸಲಾಗುತ್ತದೆ. ನಮ್ಮ ಸೇವೆಗಳಿಗೆ ಭೇಟಿ ನೀಡುವುದನ್ನು ಅಥವಾ ಬಳಸುವುದನ್ನು ಮುಂದುವರೆಸುವ ಮೂಲಕ, ಈ ಪಾಲಿಸಿಯಲ್ಲಿ ನಾವು ವಿವರಿಸುವ ಉದ್ದೇಶಗಳಿಗಾಗಿ ಕುಕೀಗಳ ಬಳಕೆಯನ್ನು ನೀವು ಅಂಗೀಕರಿಸುತ್ತೀರಿ. ನೀವು ಕುಕೀಗಳು ಅಥವಾ ಪಿಕ್ಸೆಲ್‌ಗಳನ್ನು ಪಡೆಯಲು ಬಯಸದಿದ್ದರೆ, ನೀವು ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸಬೇಕು ಅಥವಾ ಈ ಕೆಳಗೆ ವಿವರಿಸಿದಂತೆ ನಿಮ್ಮ ಬ್ರೌಸಿಂಗ್ ಮತ್ತು ಥರ್ಡ್ ಪಾರ್ಟಿ ಕುಕೀ ಸೆಟ್ಟಿಂಗ್‌ಗಳನ್ನು ಮೌಲ್ಯಮಾಪನ ಮಾಡಬೇಕು.

b. ಕುಕೀಗಳು ಮತ್ತು ಪಿಕ್ಸೆಲ್‌ಗಳು ಎಂದರೇನು?

ಕುಕೀಗಳು ವೆಬ್ ಬ್ರೌಸರ್‌ಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುವ ಟೆಕ್ಸ್ಟ್‌ನ ಸಣ್ಣ ತುಣುಕುಗಳಾಗಿವೆ. ಕಂಪ್ಯೂಟರ್‌ಗಳು, ಫೋನ್‌ಗಳು ಮತ್ತು ಇತರ ಡಿವೈಸ್‌ಗಳ ಬಗ್ಗೆ ಗುರುತಿಸುವಿಕೆದಾರರು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಪಡೆಯಲು ಕುಕೀಗಳನ್ನು ಬಳಸಲಾಗುತ್ತದೆ. ಕುಕೀ ಫೈಲ್ ಅನ್ನು ನಿಮ್ಮ ಬ್ರೌಸರ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ವೆಬ್‌ಸೈಟ್/ಅಪ್ಲಿಕೇಶನ್ ಅಥವಾ ಥರ್ಡ್ ಪಾರ್ಟಿಗೆ ನಿಮ್ಮನ್ನು ಗುರುತಿಸಲು ಮತ್ತು ನಿಮ್ಮ ಮುಂದಿನ ಭೇಟಿಯನ್ನು ಸುಲಭಗೊಳಿಸಲು ಮತ್ತು ವೆಬ್‌ಸೈಟ್/ಅಪ್ಲಿಕೇಶನ್ ಅನ್ನು ನಿಮಗೆ ಹೆಚ್ಚು ಉಪಯುಕ್ತವಾಗಿಸಲು ಅನುವು ಮಾಡಿಕೊಡುತ್ತದೆ. ನಿಮಗೆ ಉತ್ತಮವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸೇವೆ ನೀಡಲು ಮತ್ತು ನಮ್ಮ ಸೈಟ್‌ನಲ್ಲಿ ನಿಮ್ಮ ಅನುಭವವನ್ನು ಪರ್ಸನಲೈಸ್ ಮಾಡಲು SCL ಗೆ ಕುಕೀಗಳು ಅನುಮತಿ ನೀಡುತ್ತವೆ. ಪಿಕ್ಸೆಲ್ ಎಂಬುದು ವೆಬ್ ಪೇಜ್‌ನಲ್ಲಿ ಅಥವಾ ಇಮೇಲ್ ನೋಟಿಫಿಕೇಶನ್‌ನಲ್ಲಿರುವ ಸಣ್ಣ ಪ್ರಮಾಣದ ಕೋಡ್ ಆಗಿದೆ. ಅನೇಕ ಸೇವೆಗಳು ಮಾಡುವಂತೆ, ನೀವು ಕೆಲವು ವೆಬ್ ಅಥವಾ ಇಮೇಲ್ ಕಂಟೆಂಟ್‌ನೊಂದಿಗೆ ಸಂವಹನ ನಡೆಸಿದ್ದೀರಾ ಎಂಬುದನ್ನು ತಿಳಿಯಲು ನಾವು ಪಿಕ್ಸೆಲ್ಸ್ ಬಳಸುತ್ತೇವೆ. ಇದು ನಮ್ಮ ಸೇವೆಗಳನ್ನು ಅಳೆಯಲು ಮತ್ತು ಸುಧಾರಿಸಲು ಹಾಗೂ ನಿಮ್ಮ ಅನುಭವವನ್ನು ಪರ್ಸನಲೈಸ್ ಮಾಡಲು ನಮಗೆ ಸಹಾಯ ಮಾಡುತ್ತದೆ.

c. ಯಾವ ಕುಕೀಗಳನ್ನು ಬಳಸಲಾಗುತ್ತದೆ?

ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಅಥವಾ ನಮ್ಮ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಿದಾಗ, ನಾವು ನಿಮ್ಮ ಬ್ರೌಸರ್‌ನಲ್ಲಿ ಹಲವಾರು ಕುಕೀಗಳನ್ನು ಇರಿಸಬಹುದು. ಇವುಗಳನ್ನು ಫಸ್ಟ್ ಪಾರ್ಟಿ ಕುಕೀಗಳು ಎಂದು ಕರೆಯಲಾಗುತ್ತದೆ ಮತ್ತು ನೀವು ವೆಬ್‌ಸೈಟ್‌ನಲ್ಲಿ ಪೇಜ್‌ನಿಂದ ಪೇಜ್‌ಗೆ ನ್ಯಾವಿಗೇಟ್ ಮಾಡುವಾಗ ಸೆಷನ್ ಮಾಹಿತಿಯನ್ನು ಹೊಂದಲು ಅಗತ್ಯವಿದೆ. ಉದಾಹರಣೆಗೆ, ಭೇಟಿ ನೀಡುವವರು ಮತ್ತು ಬಳಕೆದಾರರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು, ಅವರ ಅನುಭವವನ್ನು ಸುಧಾರಿಸಲು ಮತ್ತು ಬಳಕೆ, ನ್ಯಾವಿಗೇಶನಲ್ ಮತ್ತು ಇತರ ಅಂಕಿ ಅಂಶ ಮಾಹಿತಿಯನ್ನು ಟ್ರ್ಯಾಕ್ ಮಾಡಲು ಮತ್ತು ವಿಶ್ಲೇಷಿಸಲು ನಾವು ನಮ್ಮ ವೆಬ್‌ಸೈಟ್‌ಗಳಲ್ಲಿ ಕುಕೀಗಳನ್ನು ಬಳಸುತ್ತೇವೆ. ಅದರ ಜೊತೆಗೆ, SCL ಸೈಟ್ ಆನ್ ಮತ್ತು ಆಫ್ ಎರಡರಲ್ಲೂ ಜಾಹೀರಾತು ನೀಡಲು ಮತ್ತು ನಿಮಗೆ ಕಸ್ಟಮೈಜ್ ಮಾಡಿದ ಫೀಚರ್‌ಗಳನ್ನು ತರಲು ಕುಕೀಗಳು ನಮಗೆ ಅನುವು ಮಾಡಿಕೊಡುತ್ತವೆ. ನೀವು ವೈಯಕ್ತಿಕ ಬ್ರೌಸರ್ ಮಟ್ಟದಲ್ಲಿ ಕುಕೀಗಳ ಬಳಕೆಯನ್ನು ನಿಯಂತ್ರಿಸಬಹುದು. ನೀವು ಕುಕೀಯನ್ನು ಸಕ್ರಿಯಗೊಳಿಸದಿದ್ದರೆ ಅಥವಾ ನಂತರ ಕುಕೀಗಳನ್ನು ನಿಷ್ಕ್ರಿಯಗೊಳಿಸಲು ನಿರ್ಧರಿಸಿದರೆ, ನೀವು ಈಗಲೂ ನಮ್ಮ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು, ಆದರೆ ವೆಬ್‌ಸೈಟ್‌ಗಳ ಕೆಲವು ಫೀಚರ್‌ಗಳು ಅಥವಾ ಏರಿಯಾಗಳನ್ನು ಬಳಸುವ ನಿಮ್ಮ ಸಾಮರ್ಥ್ಯವು ಸೀಮಿತವಾಗಿರಬಹುದು.

ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳಲ್ಲಿ ಈ ಕೆಳಗಿನ ಯಾವುದೇ ಕೆಟಗರಿಗಳ ಕುಕೀಗಳನ್ನು ನಾವು ಈ ಕೆಳಗೆ ವಿವರಿಸಿದಂತೆ ಬಳಸಬಹುದು. ಪ್ರತಿ ಕುಕೀಯು ನಾಲ್ಕು ಕೆಟಗರಿಗಳಲ್ಲಿ ಒಂದರಲ್ಲಿ ಬರುತ್ತದೆ:

ವರ್ಗ
ಶುಲ್ಕಗಳು
1. ಅಗತ್ಯ ಕುಕೀಗಳು
ಅಗತ್ಯ ಕುಕೀಗಳು (ಫಸ್ಟ್ ಪಾರ್ಟಿ ಕುಕೀಗಳು) ಕೆಲವೊಮ್ಮೆ "ಕಟ್ಟುನಿಟ್ಟಾಗಿ ಅಗತ್ಯ" ಎಂದು ಕರೆಯಲ್ಪಡುತ್ತವೆ, ಏಕೆಂದರೆ ಅವುಗಳಿಲ್ಲದೆ ನಾವು ವೆಬ್‌ಸೈಟ್‌ನಲ್ಲಿ ನಿಮಗೆ ಅಗತ್ಯವಿರುವ ಅನೇಕ ಸೇವೆಗಳನ್ನು ಒದಗಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಅಗತ್ಯ ಕುಕೀಗಳು ವೆಬ್‌ಸೈಟ್ ಸುತ್ತಮುತ್ತಲಿನ ನಿಮ್ಮ ಆದ್ಯತೆಗಳನ್ನು ನೆನಪಿನಲ್ಲಿಡಲು ಸಹಾಯ ಮಾಡುತ್ತವೆ. ಅಗತ್ಯ ಕುಕೀಗಳು ನಿಮ್ಮನ್ನು ವೆಬ್‌ಸೈಟ್‌ಗೆ ಲಾಗಿನ್ ಮಾಡುತ್ತವೆ. ಅದಿಲ್ಲದೆ ಲಾಗಿನ್ ಕಾರ್ಯನಿರ್ವಹಣೆಯು ಕೆಲಸ ಮಾಡುವುದಿಲ್ಲ.
2. ವಿಶ್ಲೇಷಣಾತ್ಮಕ ಕುಕೀಗಳು
ಈ ಕುಕೀಗಳು SCL ಮತ್ತು ಪಾಲುದಾರ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳಿಗೆ ಭೇಟಿಗಳ ಬಗ್ಗೆ ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತವೆ, ಇದರಿಂದಾಗಿ ನಾವು ಸುಧಾರಣೆಗಳನ್ನು ಮಾಡಬಹುದು ಮತ್ತು ನಮ್ಮ ಕಾರ್ಯಕ್ಷಮತೆಯನ್ನು ವರದಿ ಮಾಡಬಹುದು. ಉದಾಹರಣೆಗೆ: ಹೆಚ್ಚು ಸಂಬಂಧಿತ ವಿಷಯವನ್ನು ಒದಗಿಸಲು ಅಥವಾ ಕೆಲವು ಚಟುವಟಿಕೆಗಳನ್ನು ಸೂಚಿಸಲು ಭೇಟಿ ನೀಡುವವರು ಮತ್ತು ಬಳಕೆದಾರರ ನಡವಳಿಕೆಯನ್ನು ವಿಶ್ಲೇಷಿಸಿ. ಭೇಟಿ ನೀಡುವವರು ವೆಬ್‌ಸೈಟ್‌ಗಳನ್ನು ಹೇಗೆ ಬಳಸುತ್ತಾರೆ, ಬಳಕೆದಾರರು ಯಾವ ಸೈಟ್‌ನಿಂದ ಬಂದಿದ್ದಾರೆ, ಪ್ರತಿ ಬಳಕೆದಾರರ ಭೇಟಿಗಳ ಸಂಖ್ಯೆ ಮತ್ತು ಬಳಕೆದಾರರು ವೆಬ್‌ಸೈಟ್‌ಗಳಲ್ಲಿ ಎಷ್ಟು ಸಮಯದವರೆಗೆ ಉಳಿಯುತ್ತಾರೆ, ಎಂಬುದರ ಬಗ್ಗೆ ಮಾಹಿತಿಯನ್ನು ಅವುಗಳು ಸಂಗ್ರಹಿಸುತ್ತವೆ. ಬಳಕೆದಾರರು ಕುಕೀಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ಹೊಸ ಜಾಹೀರಾತುಗಳು, ಪುಟಗಳು ಅಥವಾ ಫೀಚರ್‌ಗಳನ್ನು ಪರೀಕ್ಷಿಸಲು ನಾವು ವಿಶ್ಲೇಷಣಾ ಕುಕೀಗಳನ್ನು ಕೂಡ ಬಳಸಬಹುದು.
3. ಕಾರ್ಯನಿರ್ವಹಣೆ ಅಥವಾ ಆದ್ಯತೆಯ ಕುಕೀಗಳು
ವೆಬ್‌ಸೈಟ್/ಅಪ್ಲಿಕೇಶನ್‌ಗಳಿಗೆ ನೀವು ಭೇಟಿ ನೀಡಿದ ಸಮಯದಲ್ಲಿ, ನಮ್ಮ ಸೇವೆಗಳನ್ನು ಬಳಸುವಾಗ ನೀವು ನಮೂದಿಸಿದ ಮಾಹಿತಿಯನ್ನು ಅಥವಾ ನೀವು ಮಾಡಿದ ಆಯ್ಕೆಗಳನ್ನು (ನಿಮ್ಮ ಬಳಕೆದಾರರ ಹೆಸರು, ಭಾಷೆ ಅಥವಾ ನಿಮ್ಮ ಪ್ರದೇಶದಂತಹ) ನೆನಪಿಡಲು ಕುಕೀಗಳನ್ನು ಬಳಸಲಾಗುತ್ತದೆ. ನಿಮ್ಮ SCL ಬಳಕೆಯನ್ನು ಉತ್ತಮಗೊಳಿಸಲು ವೆಬ್‌ಸೈಟ್‌ಗಳನ್ನು ಪರ್ಸನಲೈಸ್ ಮಾಡುವಾಗ ಅವುಗಳು ನಿಮ್ಮ ಆದ್ಯತೆಗಳನ್ನು ಸಂಗ್ರಹಿಸುತ್ತವೆ. ನಿರಂತರ ಕುಕೀಗಳ ಬಳಕೆಯ ಮೂಲಕ ಈ ಆದ್ಯತೆಗಳನ್ನು ನೆನಪಿಡಲಾಗುತ್ತದೆ ಮತ್ತು ಮುಂದಿನ ಬಾರಿ ನೀವು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದ ನಂತರ ನೀವು ಅವುಗಳನ್ನು ಮತ್ತೆ ಸೆಟ್ ಮಾಡಬೇಕಾದ ಅಗತ್ಯವಿರುವುದಿಲ್ಲ.
4. ಉದ್ದೇಶಿತ ಅಥವಾ ಜಾಹೀರಾತು ಕುಕೀಗಳು
ಈ ಕುಕೀಗಳನ್ನು, ವೆಬ್‌ಸೈಟ್‌ಗಳಲ್ಲಿ ಜಾಹೀರಾತುಗಳನ್ನು ಡೆಲಿವರಿ ಮಾಡಲು ಮತ್ತು ಜಾಹೀರಾತು ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು, ನಿಮ್ಮ ಚಟುವಟಿಕೆಗಳ (ಇದನ್ನು ಕೆಲವೊಮ್ಮೆ "ವರ್ತನೆ" "ಟ್ರ್ಯಾಕಿಂಗ್" ಅಥವಾ "ಉದ್ದೇಶಿತ" ಜಾಹೀರಾತು ಎಂದು ಕರೆಯಲಾಗುತ್ತದೆ) ಆಧಾರದ ಮೇಲೆ ನಿಮಗೆ ಸಂಬಂಧಿಸಿದ ಜಾಹೀರಾತುಗಳನ್ನು ನೀಡುವುದಕ್ಕಾಗಿ ಜಾಹೀರಾತು ನೆಟ್ವರ್ಕ್‌ಗಳನ್ನು ಸಕ್ರಿಯಗೊಳಿಸಲು ಥರ್ಡ್ ಪಾರ್ಟಿ ಜಾಹೀರಾತು ವೇದಿಕೆಗಳು ಅಥವಾ ನೆಟ್ವರ್ಕ್‌ಗಳು ಅಥವಾ SCL ವೆಬ್‌ಸೈಟ್/ಅಪ್ಲಿಕೇಶನ್‌ಗಳು ಇರಿಸುತ್ತವೆ. ನಂತರ ಅವುಗಳು ನಿಮ್ಮ ಭೇಟಿಯ ಕುರಿತಾದ ಮಾಹಿತಿಯನ್ನು, SCL ವೆಬ್‌ಸೈಟ್‌ಗಳು ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ನಿಮ್ಮ ಆಸಕ್ತಿಯ ಜಾಹೀರಾತುಗಳನ್ನು ನೀಡಲು ಬಳಸಬಹುದು. ಉದಾಹರಣೆಗೆ, ಯಾವ ಬ್ರೌಸರ್‌ಗಳು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿವೆ ಎಂಬುದನ್ನು ಈ ಕುಕೀಗಳು ನೆನಪಿಟ್ಟುಕೊಳ್ಳುತ್ತವೆ

ಹೆಚ್ಚುವರಿಯಾಗಿ, ಈ ವೆಬ್‌ಸೈಟ್/ಅಪ್ಲಿಕೇಶನ್‌ಗಳನ್ನು ಎಷ್ಟು ವೈಯಕ್ತಿಕ ಬಳಕೆದಾರರು ಅಕ್ಸೆಸ್ ಮಾಡುತ್ತಾರೆ ಮತ್ತು ಎಷ್ಟು ಬಾರಿ ಅಕ್ಸೆಸ್ ಮಾಡುತ್ತಾರೆ ಎಂಬುದನ್ನು ಟ್ರ್ಯಾಕ್ ಮಾಡಲು ಭೇಟಿಯ ಸಂಖ್ಯೆಗಳು ಮತ್ತು ಕಾರ್ಯಕ್ಷಮತೆ ಕುಕೀಗಳನ್ನು ಲೆಕ್ಕ ಹಾಕಲು SCL ವೆಬ್ ಬೀಕನ್ಸ್ ಅಥವಾ ಟ್ರ್ಯಾಕಿಂಗ್ ಪಿಕ್ಸೆಲ್ಸ್ ಅನ್ನು ಬಳಸುತ್ತದೆ. ಈ ಮಾಹಿತಿಯನ್ನು ಅಂಕಿಅಂಶದ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ ಮತ್ತು ಯಾವುದೇ ಬಳಕೆದಾರರನ್ನು ವೈಯಕ್ತಿಕವಾಗಿ ಗುರುತಿಸಲು ಅಂತಹ ಮಾಹಿತಿಯನ್ನು ಬಳಸುವುದು SCL ನ ಉದ್ದೇಶವಾಗಿರುವುದಿಲ್ಲ. ಆದಾಗ್ಯೂ, ನೀವು ಈ ವೆಬ್‌ಸೈಟ್/ಅಪ್ಲಿಕೇಶನ್‌ಗಳಲ್ಲಿ ನೋಂದಾಯಿಸಿಕೊಂಡಿದ್ದರೆ ಮತ್ತು ಸೈನ್ ಮಾಡಿದ್ದರೆ, ನೀವು ಈ ವೆಬ್‌ಸೈಟ್/ಅಪ್ಲಿಕೇಶನ್‌ಗಳನ್ನು ಹೆಚ್ಚಿನ ವಿವರವಾಗಿ ಹೇಗೆ ಬಳಸುತ್ತೀರಿ ಎಂಬುದನ್ನು ವಿಶ್ಲೇಷಿಸಲು SCL ಅದರ ವೆಬ್ ವಿಶ್ಲೇಷಣಾ ಸೇವೆಗಳು ಮತ್ತು ಕುಕೀಗಳ ಮಾಹಿತಿಯೊಂದಿಗೆ ಈ ಮಾಹಿತಿಯನ್ನು ಸಂಯೋಜಿಸಬಹುದು.

d. ಕುಕೀಗಳನ್ನು ಹೇಗೆ ಬಳಸಲಾಗುತ್ತದೆ?

ನಾವು ನಮ್ಮ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳಲ್ಲಿ ಕುಕೀಗಳನ್ನು ಬಳಸುತ್ತೇವೆ. ಈ ಸೈಟ್‌ಗಳಿಗೆ ಭೇಟಿ ನೀಡುವ ಯಾವುದೇ ಬ್ರೌಸರ್ ನಮ್ಮಿಂದ ಕುಕೀಗಳನ್ನು ಪಡೆಯುತ್ತದೆ, ಇದು ನೀವು ಹಿಂದಿರುಗಿದಾಗ ನಿಮ್ಮನ್ನು ಹೆಚ್ಚು ತ್ವರಿತವಾಗಿ ಗುರುತಿಸಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಸ್ವಂತ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳಲ್ಲಿ ನಿಮಗೆ ಯಾವ ಪುಟಗಳು ಅಥವಾ ಮಾಹಿತಿಯು ಹೆಚ್ಚು ಉಪಯುಕ್ತ ಅಥವಾ ಆಸಕ್ತಿದಾಯಕವಾಗಿವೆ ಎಂಬುದನ್ನು ನಿರ್ಧರಿಸಲು ಕುಕೀಗಳು ನಮಗೆ ಸಹಾಯ ಮಾಡುತ್ತವೆ.

  • ಆನ್ಲೈನ್ ವಿಶ್ಲೇಷಣೆ ಉದ್ದೇಶಗಳು: ನಾವು SCL ನಲ್ಲಿ ಗೂಗಲ್ ಅನಾಲಿಟಿಕ್ಸ್‌ನಂತಹ ವೆಬ್ ವಿಶ್ಲೇಷಣಾ ಸೇವೆಗಳನ್ನು ಬಳಸಬಹುದು. ನೀವು ತಲುಪುವ ಥರ್ಡ್ ಪಾರ್ಟಿ ವೆಬ್‌ಸೈಟ್/ಅಪ್ಲಿಕೇಶನ್‌ಗಳನ್ನು ಗಮನಿಸುವ ಮೂಲಕ ಬಳಕೆದಾರರು ಸೇವೆಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ವಿಶ್ಲೇಷಿಸಲು ಈ ಸೇವೆಗಳು ನಮಗೆ ಸಹಾಯ ಮಾಡುತ್ತವೆ. ತಂತ್ರಜ್ಞಾನದ ಮೂಲಕ ಸಂಗ್ರಹಿಸಲಾದ ಮಾಹಿತಿಯನ್ನು ಅಂತಹ ಸೇವಾ ಪೂರೈಕೆದಾರರಿಗೆ ಬಹಿರಂಗಪಡಿಸಲಾಗುತ್ತದೆ ಅಥವಾ ನೇರವಾಗಿ ಅವರಿಂದ ಸಂಗ್ರಹಿಸಲಾಗುತ್ತದೆ, ಅವರು ಸೇವೆಗಳ ನಿಮ್ಮ ಬಳಕೆಯನ್ನು ಮೌಲ್ಯಮಾಪನ ಮಾಡಲು ಮಾಹಿತಿಯನ್ನು ಬಳಸುತ್ತಾರೆ. ಈ ಕೆಳಗಿನ ವಿಭಾಗಗಳಲ್ಲಿ ವಿವರಿಸಿದಂತೆ, ಆನ್ಲೈನ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಕೆಲವು ಉದ್ದೇಶಗಳಿಗಾಗಿ ನಾವು ಗೂಗಲ್ ಅನಾಲಿಟಿಕ್ಸ್ ಅನ್ನು ಕೂಡ ಬಳಸುತ್ತೇವೆ.

  • ಜಾಹೀರಾತು ಮತ್ತು ಇತರ ಉದ್ದೇಶಗಳು: ಸಂಬಂಧಿತ ಜಾಹೀರಾತುಗಳನ್ನು ನಿಮಗೆ ಹೆಚ್ಚು ಪರಿಣಾಮಕಾರಿಯಾಗಿ ಒದಗಿಸಲು ಕುಕೀಗಳು ನಮಗೆ ಸಹಾಯ ಮಾಡುತ್ತವೆ. ಜಾಹೀರಾತುದಾರರಿಗೆ ಒಟ್ಟುಗೂಡಿಸಿದ ಆಡಿಟಿಂಗ್, ಸಂಶೋಧನೆ ಮತ್ತು ವರದಿಯನ್ನು ಒದಗಿಸಲು, ನಮ್ಮ ಸೇವೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸುಧಾರಿಸಲು ಮತ್ತು ನಿಮಗೆ ಯಾವಾಗ ವಿಷಯವನ್ನು ತೋರಿಸಲಾಗಿದೆ ಎಂಬುದನ್ನು ತಿಳಿಯಲು ಅವುಗಳು ನಮಗೆ ಸಹಾಯ ಮಾಡುತ್ತವೆ. ನಾವು ಗೂಗಲ್, ಫೇಸ್‌ಬುಕ್, ಲಿಂಕ್ಡ್-ಇನ್, ಟ್ವಿಟರ್, ಗೂಗಲ್ ಡಬಲ್ ಕ್ಲಿಕ್, ಇನ್‌ಮೊಬಿ, ಆ್ಯಡ್‌ಸೆನ್ಸ್, ಸೆನ್ಸ್‌ಡಿಜಿಟಲ್ ಲೀಡ್ ಬೋಲ್ಟ್, ಪೈಸಾ ಬಜಾರ್, ಮ್ಯಾಜಿಕ್ ಬ್ರಿಕ್ಸ್, ಪ್ರಾಪ್ ಟೈಗರ್ ಇತ್ಯಾದಿಗಳನ್ನು ಒಳಗೊಂಡಂತೆ ಆದರೆ ಇಷ್ಟಕ್ಕೆ ಮಾತ್ರ ಸೀಮಿತವಾಗಿರದೇ, ಥರ್ಡ್ ಪಾರ್ಟಿ ಪಬ್ಲಿಶರ್ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳಲ್ಲಿ SCL ಜಾಹೀರಾತುಗಳನ್ನು ನೀಡಲು, ಈ ಪಾಲುದಾರರು ನಿಮ್ಮ ಡಿವೈಸ್‌ಗಳ ವೆಬ್ ಬ್ರೌಸರ್‌ನಲ್ಲಿ ಕುಕೀಗಳನ್ನು ಸೆಟ್ ಮಾಡಲು ವೆಬ್‌ಸೈಟ್/ಅಪ್ಲಿಕೇಶನ್‌ಗಳ ವಿಶ್ಲೇಷಕರು ಮತ್ತು ಜಾಹೀರಾತು ಪಾಲುದಾರರೊಂದಿಗೆ ಕೆಲಸ ಮಾಡುತ್ತೇವೆ. ನಿಮ್ಮ ಕಂಪ್ಯೂಟರ್ ಅನ್ನು ಗುರುತಿಸಲು ಕುಕೀಗಳು ನಮ್ಮ ಪಾಲುದಾರರಿಗೆ ಅನುಮತಿ ನೀಡುತ್ತವೆ, ಇದರಿಂದಾಗಿ ಜಾಹೀರಾತು ಸರ್ವರ್ ನಿಮಗೆ ಇಂಟರ್ನೆಟ್‌ನಲ್ಲಿ ಬೇರೆಡೆ SCL ಜಾಹೀರಾತುಗಳನ್ನು ತೋರಿಸಬಹುದು ಮತ್ತು ಇದರಿಂದಾಗಿ ನಮ್ಮ ವಿಶ್ಲೇಷಣಾ ಸಾಫ್ಟ್‌ವೇರ್ SCL ಸೇವೆಗಳನ್ನು ಬಳಸುವಾಗ ನಿಮ್ಮ ತೊಡಗುವಿಕೆ ಮತ್ತು ಸಂವಹನಗಳನ್ನು ಅಳೆಯಬಹುದು. ಈ ರೀತಿಯಲ್ಲಿ, ಜಾಹೀರಾತು ಸರ್ವರ್‌ಗಳು ನೀವು ಅಥವಾ ನಿಮ್ಮ ಕಂಪ್ಯೂಟರ್ ಬಳಸುತ್ತಿರುವ ವ್ಯಕ್ತಿ ಎಲ್ಲಿಂದ ಜಾಹೀರಾತುಗಳನ್ನು ನೋಡುತ್ತಿದ್ದಾರೆ ಎಂಬುದನ್ನು , ನೀವು ನಮ್ಮ ಜಾಹೀರಾತುಗಳೊಂದಿಗೆ ಸಂವಹನ ನಡೆಸಿದ್ದೀರಾ ಅಥವಾ ಇಲ್ಲವೇ ಎಂಬುದರ ಬಗ್ಗೆ ಮತ್ತು SCL ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ನಂತರದ ಭೇಟಿಗಳಲ್ಲಿ ಮಾಡಿದ ಕ್ರಿಯೆಗಳ ಕುರಿತು ಅನಾಮಧೇಯ, ಗುರುತಿಸಲ್ಪಟ್ಟ ಮಾಹಿತಿಯನ್ನು ಸಂಗ್ರಹಿಸಬಹುದು. ನಿಮ್ಮ ಆಸಕ್ತಿಯ ವಿಷಯಗಳು ಎಂದು ತಾವು ನಂಬುವ ಉದ್ದೇಶಿತ ಜಾಹೀರಾತುಗಳನ್ನು ನಿಮಗೆ ತಲುಪಿಸಲು ಈ ಮಾಹಿತಿಯು ಜಾಹೀರಾತು ನೆಟ್‌ವರ್ಕ್‌ಗೆ ಅನುಮತಿಸುತ್ತದೆ ಮತ್ತು ಇದು ನಮ್ಮ ಜಾಹೀರಾತು ಪ್ರಚಾರಗಳ ಕಾರ್ಯಕ್ಷಮತೆ ಮತ್ತು ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ಗಳ ಉಪಯುಕ್ತತೆಯನ್ನು ಅತ್ಯುತ್ತಮವಾಗಿ ಸುಧಾರಿಸಲು SCL ಗೆ ಅನುವು ಮಾಡಿಕೊಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಗೂಗಲ್, ಫೇಸ್‌ಬುಕ್, ಲಿಂಕ್ಡ್-ಇನ್, ಟ್ವಿಟರ್, ಗೂಗಲ್ ಡಬಲ್ ಕ್ಲಿಕ್, ಇನ್‌ಮೊಬಿ, ಆ್ಯಡ್‌ಸೆನ್ಸ್, ಸೆನ್ಸ್‌ಡಿಜಿಟಲ್, ಲೀಡ್ ಬೋಲ್ಟ್, ಪೈಸಾ ಬಜಾರ್, ಮ್ಯಾಜಿಕ್ ಬ್ರಿಕ್ಸ್, ಪ್ರಾಪ್ ಟೈಗರ್ ಮುಂತಾದ ಪರಿಹಾರಗಳನ್ನು ಬಳಸಿಕೊಂಡು ತೋರಿಸಲಾದ ನಮ್ಮ ಆನ್ಲೈನ್ ಜಾಹೀರಾತುಗಳ ಡೇಟಾದೊಂದಿಗೆ ನಾವು ವಿಶ್ಲೇಷಣಾ ಡೇಟಾವನ್ನು ಬಳಸುತ್ತೇವೆ. ಹಾಗೆ ಮಾಡುವ ಮೂಲಕ, ನಮ್ಮ ಜಾಹೀರಾತುಗಳನ್ನು ನೋಡಿದ ನಂತರ ನಮ್ಮೊಂದಿಗೆ / ಅಪ್ಲಿಕೇಶನ್‌ಗಳೊಂದಿಗೆ ಅನಾಮಧೇಯ ಬಳಕೆದಾರರು ಹೇಗೆ ಸಂವಹನ ನಡೆಸಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು.

e. SCL ಯಾವ ಥರ್ಡ್ ಪಾರ್ಟಿ ಕುಕೀಗಳನ್ನು ಬಳಸುತ್ತದೆ?

ಥರ್ಡ್ ಪಾರ್ಟಿಗಳು (ಜಾಹೀರಾತು ನೆಟ್ವರ್ಕ್‌ಗಳು ಮತ್ತು ವೆಬ್ ಟ್ರಾಫಿಕ್ ವಿಶ್ಲೇಷಣಾ ಸೇವೆಗಳಂತಹ ಬಾಹ್ಯ ಸೇವೆಗಳ ಪೂರೈಕೆದಾರರು) ನಮ್ಮ ಸೇವೆಗಳಲ್ಲಿ ಕುಕೀಗಳನ್ನು ಬಳಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಅಲ್ಲದೆ, ಕುಕೀಸ್, ಪಿಕ್ಸೆಲ್ಸ್ ಮತ್ತು ಅಂತಹ ತಂತ್ರಜ್ಞಾನಗಳ ಹೆಸರುಗಳು ಕಾಲಕಾಲಕ್ಕೆ ಬದಲಾಗಬಹುದು ಎಂಬುದನ್ನು ಗಮನಿಸಿ. ನಿಮ್ಮ ಡಿವೈಸ್‌ನಲ್ಲಿ ಕುಕೀಸ್ ಇರಿಸಬಹುದಾದ ಜಾಹೀರಾತುಗಳ ಸೇವೆ ನೀಡುವುದಕ್ಕಾಗಿ ನಮಗೆ ಸಹಾಯ ಮಾಡಲು ನಾವು ವಿಶ್ವಾಸಾರ್ಹ ಪಾಲುದಾರರನ್ನು ಬಳಸುತ್ತೇವೆ. ನಾವು ಸೋಷಿಯಲ್ ಮೀಡಿಯಾ ನೆಟ್ವರ್ಕ್‌ಗಳಿಂದ ವಿಷಯಗಳನ್ನು ನಮ್ಮ ಸ್ವಂತ ಪುಟಗಳಾದ ಎಂಬೆಡೆಡ್ ಫೇಸ್‌ಬುಕ್ ಫೀಡ್‌ಗಳಲ್ಲಿ ಕೂಡ ತರುತ್ತೇವೆ. ಫೇಸ್‌ಬುಕ್, ಗೂಗಲ್ ಮುಂತಾದ ಸೋಷಿಯಲ್ ನೆಟ್ವರ್ಕ್‌ಗಳು ಕೂಡ ನಿಮ್ಮ ಮಷೀನ್‌ನಲ್ಲಿ ಕುಕೀಗಳನ್ನು ಇರಿಸಬಹುದು. ಬಳಕೆದಾರರು ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ಗಳ ಮೂಲಕ ಫೇಸ್‌ಬುಕ್, ಟ್ವಿಟರ್ ಅಥವಾ ಗೂಗಲ್+ ಗೆ ಲಾಗಿನ್ ಆದರೆ, ಅವರು ಬಳಕೆದಾರರ ಡಿವೈಸ್‌ನಲ್ಲಿ ಕುಕೀಸ್ ಇಡುತ್ತಾರೆ. ಬಳಕೆದಾರರು ನೇರವಾಗಿ ಈ ಸೋಷಿಯಲ್ ನೆಟ್ವರ್ಕ್‌ಗಳಿಗೆ ಲಾಗಿನ್ ಆಗುವಾಗಲೂ ಇದೇ ಪ್ರಕ್ರಿಯೆಯಾಗಿದೆ. ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿಶ್ಲೇಷಿಸಲು ನಮಗೆ ಸಹಾಯ ಮಾಡುವುದಕ್ಕಾಗಿ ನಾವು ಗೂಗಲ್ ಅನಾಲಿಸ್ಟಿಕ್ಸ್ ಮತ್ತು ಅದೇ ರೀತಿಯ ಪರಿಹಾರಗಳನ್ನು ಬಳಸುತ್ತೇವೆ. ಗ್ರಾಹಕರ ಸಂವಹನಗಳನ್ನು ಟ್ರ್ಯಾಕ್ ಮಾಡಲು ಇದು ಪರ್ಫಾರ್ಮೆನ್ಸ್ ಕುಕೀಗಳನ್ನು ಬಳಸುತ್ತದೆ. ಉದಾಹರಣೆಗೆ, ಕುಕೀಗಳನ್ನು ಬಳಸುವ ಮೂಲಕ, ನಮ್ಮ ಬಳಕೆದಾರರು ಯಾವ ಪುಟಗಳನ್ನು ನೋಡುತ್ತಾರೆ, ಯಾವುದು ಅತ್ಯಂತ ಜನಪ್ರಿಯವಾಗಿದೆ, ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ಗಳಿಗೆ ಯಾವ ಸಮಯದಲ್ಲಿ ಭೇಟಿ ನೀಡುತ್ತಾರೆ, ಭೇಟಿ ನೀಡುವವರು ನಮ್ಮ ವೆಬ್‌ಸೈಟ್‌ಗಳಿಗೆ ಈ ಮೊದಲೂ ಭೇಟಿ ನೀಡಿದ್ದಾರೆಯೇ, ಯಾವ ವೆಬ್‌ಸೈಟ್ ಉಲ್ಲೇಖದ ಮೂಲಕ ಭೇಟಿ ನೀಡುವವರು ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ಗಳಿಗೆ ಬಂದಿದ್ದಾರೆ ಮತ್ತು ಈ ರೀತಿಯ ಇತರ ಮಾಹಿತಿಯನ್ನು ಗೂಗಲ್ ನಮಗೆ ತಿಳಿಸಬಹುದು. ಈ ಎಲ್ಲಾ ಮಾಹಿತಿಯನ್ನು ಅನಾಮಧೇಯಗೊಳಿಸಲಾಗುತ್ತದೆ. ಈ ಸಂಸ್ಥೆಗಳು ನಿಮ್ಮ ಬಗ್ಗೆ ಯಾವ ಡೇಟಾವನ್ನು ಹೊಂದಿವೆ ಮತ್ತು ಅವುಗಳು ಅದನ್ನು ಹೇಗೆ ಪ್ರಕ್ರಿಯೆಗೊಳಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ಈ ಬಾಹ್ಯ ಸೇವೆಗಳಿಗೆ ಸಂಬಂಧಿಸಿದ ಗೌಪ್ಯತಾ ಪಾಲಿಸಿಗಳನ್ನು ನೀವು ಪರಿಶೀಲಿಸಬೇಕು ಎಂದು ನಾವು ಸಲಹೆ ಮಾಡುತ್ತೇವೆ.

ಫೇಸ್‌ಬುಕ್: https://www.facebook.com/policy.php

ಆ್ಯಡ್‌ಸೆನ್ಸ್: https://policies.google.com/technologies/ads

ಗೂಗಲ್ ವಿಶ್ಲೇಷಣೆ: http://www.google.com/analytics/learn/privacy.html

ಗೂಗಲ್ ಟ್ಯಾಗ್ ಮ್ಯಾನೇಜರ್: https://www.google.com/analytics/tag-manager/faq/

ಗೂಗಲ್+: https://www.google.com/policies/privacy/

ಟ್ವಿಟ್ಟರ್: https://twitter.com/en/privacy.

ಗೂಗಲ್ ಡಬಲ್ ಕ್ಲಿಕ್: https://support.google.com/dfp_premium/answer/2839090?hl=en

ನಿಮ್ಮ ಆಯ್ಕೆಗಳು

ಹೆಚ್ಚಿನ ಬ್ರೌಸರ್‌ಗಳು ತಮ್ಮ ಸೆಟ್ಟಿಂಗ್‌ಗಳ ಆದ್ಯತೆಗಳ ಮೂಲಕ ಕುಕೀಗಳನ್ನು ನಿಯಂತ್ರಿಸಲು ನಿಮಗೆ ಅನುವು ಮಾಡಿಕೊಡುತ್ತವೆ. ಆದಾಗ್ಯೂ, ನೀವು ಈ ಕುಕೀಗಳನ್ನು ಆಫ್ ಮಾಡುವುದನ್ನು ಆಯ್ಕೆ ಮಾಡಿದರೆ ನೀವು ಆಗಲೂ ಇಂಟರ್ನೆಟ್‌ನಲ್ಲಿ ಜಾಹೀರಾತು ನೋಡುತ್ತೀರಿ ಆದರೆ ಅವು ನಿಮ್ಮ ಆಸಕ್ತಿಗೆ ಅನುಗುಣವಾಗಿ ಇರುವುದಿಲ್ಲ. ಅಂದರೆ ನೀವು ಆನ್ಲೈನ್‌ನಲ್ಲಿರುವಾಗ ಯಾವುದೇ ಜಾಹೀರಾತುಗಳು ನಿಮಗೆ ಕಾಣಿಸುವುದಿಲ್ಲ ಎಂದರ್ಥವಲ್ಲ. ಟಾರ್ಗೆಟಿಂಗ್ ಅಥವಾ ಜಾಹೀರಾತು ಕುಕೀಗಳನ್ನು ಬಳಸುವಲ್ಲಿ ಒಳಗೊಂಡಿರುವ ಹೆಚ್ಚಿನ ಥರ್ಡ್ ಪಾರ್ಟಿಗಳನ್ನು ನಾವು ಹಿಂದಿನ ಸೆಕ್ಷನ್‌ನಲ್ಲಿ ಉಲ್ಲೇಖಿಸಿದ್ದು (ಸೆಕ್ಷನ್ D ಅನ್ನು ನೋಡಿ), ಪಟ್ಟಿಯು ಸಮಗ್ರವಾಗಿಲ್ಲ ಮತ್ತು ಬದಲಾವಣೆಗೆ ಒಳಪಟ್ಟಿರುತ್ತದೆ. ಆದ್ದರಿಂದ, ನೀವು ಸೆಕ್ಷನ್‌ನಲ್ಲಿ (ಸೆಕ್ಷನ್ D ನೋಡಿ) ಪಟ್ಟಿ ಮಾಡಲಾದ ಎಲ್ಲಾ ಥರ್ಡ್ ಪಾರ್ಟಿ ಕುಕೀಗಳನ್ನು ಆಫ್ ಮಾಡಲು ಆಯ್ಕೆ ಮಾಡಿದರೂ ಕೂಡಾ, ನೀವು ಇನ್ನೂ ಕೆಲವು ಸೂಕ್ತವಾದ ಜಾಹೀರಾತುಗಳು ಮತ್ತು ಶಿಫಾರಸುಗಳನ್ನು ಪಡೆಯಬಹುದು. ನಿಮ್ಮ ಡಿವೈಸ್‌ಗಳಲ್ಲಿ ಯಾವ ಕುಕೀಗಳನ್ನು ಸೆಟ್ ಮಾಡಲಾಗಿದೆ ಎಂಬುದನ್ನು ನೀವು ನಿರ್ವಹಿಸಲು ಹಲವಾರು ಮಾರ್ಗಗಳಿವೆ. ಆದಾಗ್ಯೂ, ಅಗತ್ಯ ಕುಕೀಗಳನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಕೆಲವು ಕುಕೀಗಳನ್ನು ಇನ್‌ಸ್ಟಾಲ್ ಮಾಡಲು ನೀವು ಅನುಮತಿಸದಿದ್ದರೆ, ವೆಬ್‌ಸೈಟ್/ಅಪ್ಲಿಕೇಶನ್ ಅನ್ನು ಅಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗದಿರಬಹುದು ಮತ್ತು/ಅಥವಾ ಕಾರ್ಯಕ್ಷಮತೆ, ವೈಶಿಷ್ಟ್ಯಗಳು ಅಥವಾ ಸೇವೆಗಳನ್ನು ಕಳೆದುಕೊಳ್ಳಬೇಕಾಗಬಹುದು. ನೀವು ಬಳಸುತ್ತಿರುವ ವೆಬ್ ಬ್ರೌಸರ್‌ನಲ್ಲಿನ ಗೌಪ್ಯತಾ ಸೆಟ್ಟಿಂಗ್‌ಗಳಲ್ಲೂ ಕೂಡ ಈ ರೀತಿಯ ಕುಕೀಯನ್ನು ನೀವು ನಿರ್ವಹಿಸಬಹುದು. ಎಲ್ಲಾ ಕುಕೀಗಳನ್ನು ಬ್ಲಾಕ್ ಮಾಡಲು ನಿಮ್ಮ ಬ್ರೌಸರ್ ಸೆಟ್ಟಿಂಗ್‌ಗಳನ್ನು ನೀವು ಬಳಸಿದರೆ ನಮ್ಮ ಅಥವಾ ಇತರರ ವೆಬ್‌ಸೈಟ್‌ಗಳ ಭಾಗಗಳನ್ನು ಅಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗದಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಕೆಳಗೆ ನೋಡಿ.

ನಿಮ್ಮ ಕುಕೀ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು: ನಿಮ್ಮ ಕುಕೀಗಳ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಬ್ರೌಸರ್ ಸೆಟ್ಟಿಂಗ್‌ಗಳು ಸಾಮಾನ್ಯವಾಗಿ ನಿಮ್ಮ ಇಂಟರ್ನೆಟ್ ಬ್ರೌಸರ್‌ನ 'ಆಯ್ಕೆಗಳು' ಅಥವಾ 'ಆದ್ಯತೆಗಳು' ಮೆನುವಿನಲ್ಲಿ ಕಂಡುಬರುತ್ತವೆ. ಈ ಸೆಟ್ಟಿಂಗ್‌ಗಳನ್ನು ಅರ್ಥಮಾಡಿಕೊಳ್ಳಲು, ಈ ಕೆಳಗಿನ ಲಿಂಕ್‌ಗಳು ಸಹಾಯಕವಾಗಬಹುದು. ಇಲ್ಲದಿದ್ದರೆ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಇಂಟರ್ನೆಟ್ ಬ್ರೌಸರ್‌ನಲ್ಲಿ 'ಸಹಾಯ' ಆಯ್ಕೆಯನ್ನು ನೀವು ಬಳಸಬೇಕು.

ಇಂಟರ್ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಕುಕೀ ಸೆಟ್ಟಿಂಗ್‌ಗಳು

ಫೈರ್‌ಫಾಕ್ಸ್‌ನಲ್ಲಿ ಕುಕೀ ಸೆಟ್ಟಿಂಗ್‌ಗಳು

ಕ್ರೋಮ್‌ನಲ್ಲಿ ಕುಕೀ ಸೆಟ್ಟಿಂಗ್‌ಗಳು

ಸಫಾರಿಯಲ್ಲಿ ಕುಕೀ ಸೆಟ್ಟಿಂಗ್‌ಗಳು

ಹೆಚ್ಚಿನ ಮಾಹಿತಿ: ಕುಕೀಗಳನ್ನು ಹೇಗೆ ಸೆಟ್ ಮಾಡಲಾಗಿದೆ ಮತ್ತು ಅವುಗಳನ್ನು ನಿರ್ವಹಿಸುವುದು ಮತ್ತು ಅಳಿಸುವುದು ಹೇಗೆ ಎಂಬುದನ್ನು ಒಳಗೊಂಡಂತೆ ಕುಕೀಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಭೇಟಿ ನೀಡಿ www.allaboutcookies.org. ಇತರ ಕಂಪನಿಗಳಿಂದ ಆಸಕ್ತಿ-ಆಧಾರಿತ ಜಾಹೀರಾತುಗಳನ್ನು ಪಡೆಯುವುದರಿಂದ ಹೊರಗುಳಿಯುವ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು: optout.aboutads.info ಮತ್ತು www.networkadvertising.org/choices. ಹೆಚ್ಚುವರಿಯಾಗಿ, ಫೇಸ್‌ಬುಕ್ (ಪಿಕ್ಸೆಲ್‌ಗಳು) ಮತ್ತು ಗೂಗಲ್‌ನಂತಹ ಕೆಲವು ಥರ್ಡ್ ಪಾರ್ಟಿ ಜಾಹೀರಾತು ನೆಟ್ವರ್ಕ್‌ಗಳು, ನಿಮ್ಮ ಇಂಟರ್ನೆಟ್ ಬ್ರೌಸಿಂಗ್‌ಗೆ ಸಂಬಂಧಿಸಿದ ಆದ್ಯತೆಗಳನ್ನು ಆಯ್ಕೆ ಮಾಡಲು ಅಥವಾ ಕಸ್ಟಮೈಜ್ ಮಾಡಲು ಬಳಕೆದಾರರಿಗೆ ಅನುಮತಿ ನೀಡುತ್ತವೆ. ಗೂಗಲ್‌ನ ಈ ಫೀಚರ್ ಬಗ್ಗೆ ಇನ್ನಷ್ಟು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ. ಫೇಸ್‌ಬುಕ್ ಪಿಕ್ಸೆಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ.

logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon
icon
ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ