logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
ಅಪ್ಲೈ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಗೌಪ್ಯತಾ ನೀತಿ

ಗೌಪ್ಯತಾ ನೀತಿ

ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ (ಇನ್ನು ಮುಂದೆ "ನಾವು", "ನಮ್ಮ" ಇತ್ಯಾದಿ ಕರೆಯಲಾಗುತ್ತದೆ) ಕಂಪನಿಯನ್ನು ಕಂಪನಿಗಳ ಕಾಯ್ದೆ, 1956 ನಿಬಂಧನೆಗಳ ಅಡಿಯಲ್ಲಿ ಸಂಯೋಜಿಸಲಾಗಿದ್ದು, ನಮ್ಮ ನೋಂದಾಯಿತ ಕಚೇರಿಯ ವಿಳಾಸ M-62 & 63, ಫಸ್ಟ್ ಫ್ಲೋರ್, ಕನಾಟ್ ಪ್ಲೇಸ್, ನವದೆಹಲಿ – 110 001 ಮತ್ತು ಕಾರ್ಪೊರೇಟ್ ಗುರುತಿನ ಸಂಖ್ಯೆ L65922DL2005PLC136029 ಆಗಿದೆ, ನಾವು ನಿಮ್ಮ ವಿಶ್ವಾಸಕ್ಕೆ ಬೆಲೆ ನೀಡುತ್ತೇವೆ ಮತ್ತು ಗೌಪ್ಯತೆಯ ನಿಮ್ಮ ಹಕ್ಕನ್ನು ಗೌರವಿಸುತ್ತೇವೆ.

ಈ ಗೌಪ್ಯತಾ ಪಾಲಿಸಿಯು ನಿಮ್ಮ ಡೇಟಾವನ್ನು ನಾವು ಸಂಗ್ರಹಿಸುವ, ಕೂಡಿಡುವ ಮತ್ತು ಬಳಸುವ ವಿಧಾನದ ಬಗ್ಗೆ ವಿವರಗಳನ್ನು ನಿಮಗೆ ಒದಗಿಸುತ್ತದೆ. ಈ ಗೌಪ್ಯತಾ ಪಾಲಿಸಿಯನ್ನು ಎಚ್ಚರಿಕೆಯಿಂದ ಓದುವಂತೆ ನಿಮಗೆ ಸಲಹೆ ನೀಡಲಾಗಿದೆ. ಈ ಗೌಪ್ಯತಾ ಪಾಲಿಸಿಯ ನಿಯಮಗಳನ್ನು ನೀವು ಒಪ್ಪಿಕೊಳ್ಳದಿದ್ದರೆ, ದಯವಿಟ್ಟು ಇನ್ನು ಮುಂದೆ ಸಮ್ಮಾನ್ ಕ್ಯಾಪಿಟಲ್ ವೆಬ್‌ಸೈಟ್ ಅಥವಾ ಸಮ್ಮಾನ್ ಕ್ಯಾಪಿಟಲ್ ಅಪ್ಲಿಕೇಶನ್‌ಗಳನ್ನು ಬಳಸಬೇಡಿ ಅಥವಾ ಅಕ್ಸೆಸ್ ಮಾಡಬೇಡಿ.

ಸಾಮಾನ್ಯ

ಈ ಗೌಪ್ಯತಾ ಹೇಳಿಕೆಯು ಸಮ್ಮಾನ್ ಕ್ಯಾಪಿಟಲ್‌ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳಿಗೆ (ಮೊಬೈಲ್ ಮತ್ತು ಹೈಬ್ರಿಡ್, ಇನ್ನು ಮುಂದೆ "ಅಪ್ಲಿಕೇಶನ್‌ಗಳು" ಎಂದು ಉಲ್ಲೇಖಿಸಲಾಗುತ್ತದೆ) ಅನ್ವಯವಾಗುತ್ತದೆ. ನಮ್ಮ ಸೇವೆಗಳನ್ನು ಅಕ್ಸೆಸ್ ಮಾಡಲು ನೀವು ಕಂಪ್ಯೂಟರ್, ಮೊಬೈಲ್ ಫೋನ್, ಟ್ಯಾಬ್ಲೆಟ್ ಅಥವಾ ಟೆಲಿವಿಷನ್ ಅಥವಾ ಇತರ ಯಾವುದೇ ಮಾಧ್ಯಮ ಅಥವಾ ಕಂಪ್ಯೂಟರ್ ಸಂಪನ್ಮೂಲವನ್ನು ಬಳಸುತ್ತೀರಾ ಎಂಬುದನ್ನು ಪರಿಗಣಿಸದೆ ಈ ಗೌಪ್ಯತಾ ಪಾಲಿಸಿಯು ಅನ್ವಯವಾಗುತ್ತದೆ. ನಮ್ಮ ಸೇವೆಗಳ ಬಳಕೆಗೆ ಸಂಬಂಧಿಸಿದಂತೆ ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ಗಳಲ್ಲಿ ನೋಂದಣಿ ಮಾಡುವವರಿಗೆ ಅಥವಾ ಸಮ್ಮಾನ್ ಕ್ಯಾಪಿಟಲ್ ತನ್ನ ಸೇವೆಗಳಿಗೆ ಸಂಬಂಧಿಸಿದಂತೆ ಯಾರ ಡೇಟಾವನ್ನು ಸ್ವೀಕರಿಸುತ್ತದೆಯೋ ಅವರಿಗೂ ಕೂಡ ಇದು ಅನ್ವಯವಾಗುತ್ತದೆ. ನೀವು ಈ ಗೌಪ್ಯತಾ ಪಾಲಿಸಿಯನ್ನು ಎಚ್ಚರಿಕೆಯಿಂದ ಓದುವುದು ಮುಖ್ಯವಾಗಿದೆ. ಯಾಕೆಂದರೆ, ನೀವು ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ಗಳನ್ನು ಬಳಸಿದಾಗಲೆಲ್ಲಾ, ಈ ಪಾಲಿಸಿಯ ಪ್ರಕಾರ ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲಾಗುತ್ತದೆ (ಅಗತ್ಯವಿದ್ದರೆ).

ವೈಯಕ್ತಿಕ ಡೇಟಾ ಮತ್ತು ಅದರ ಸಂಗ್ರಹಣೆ

ವೈಯಕ್ತಿಕ ಡೇಟಾ ಎಂದರೆ ಹೆಸರು, ವಿಳಾಸ, ಸಂವಹನ ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ID, ಕ್ರೆಡಿಟ್/ಡೆಬಿಟ್ ಪಾವತಿ ಸಾಧನಗಳಿಗೆ ಲಿಂಕ್ ಮಾಡಲಾದ ವಿವರಗಳನ್ನು ಒಳಗೊಂಡಂತೆ ಬ್ಯಾಂಕ್ ಅಕೌಂಟ್ ವಿವರಗಳು, ನಿಮ್ಮ ಮೊಬೈಲ್ ಫೋನ್ ಕುರಿತಾದ ಮಾಹಿತಿ, ಗ್ರಾಹಕರು ಸ್ವಯಂಪ್ರೇರಿತರಾಗಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI), ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೋ ಆಫ್ ಇಂಡಿಯಾ ಲಿಮಿಟೆಡ್ (ಸಿಬಿಲ್) ಅಥವಾ ಯಾವುದೇ ಇತರ ಕ್ರೆಡಿಟ್ ಮಾಹಿತಿ ಕಂಪನಿಗಳು (CIC) ಸೇರಿದಂತೆ ಯಾವುದೇ ಇತರ ಏಜೆನ್ಸಿಗೆ ಒದಗಿಸಿದ ಯಾವುದೇ ವೈಯಕ್ತಿಕ ವಿವರಗಳನ್ನು ಒಳಗೊಂಡು ಆದರೆ ಅವುಗಳಿಗೆ ಮಾತ್ರ ಸೀಮಿತವಾಗಿರದೆ, ಗುರುತಿಸಲಾದ ಅಥವಾ ಗುರುತಿಸಬಹುದಾದ ಜೀವಂತ ವ್ಯಕ್ತಿಗೆ (ಡೇಟಾ ಸಬ್ಜೆಕ್ಟ್ ಅನ್ನು ಇಲ್ಲಿ ನೀವು/ನಿಮ್ಮ ಎಂದು ಉಲ್ಲೇಖಿಸಲಾಗಿದೆ) ಸಂಬಂಧಿಸಿದ ಯಾವುದೇ ಡೇಟಾ ಎಂಬ ಅರ್ಥ ನೀಡುತ್ತದೆ ಮತ್ತು ಒಳಗೊಂಡಿದೆ.

1. ನೀವು ನಮ್ಮ ವೆಬ್‌ಸೈಟ್ ಬಳಸಿದಾಗ ಸಂಗ್ರಹಿಸಲಾದ ಮಾಹಿತಿ

ನಮ್ಮ ಎಲ್ಲಾ ಬಳಕೆದಾರರಿಗೆ ಉತ್ತಮ ಸೇವೆಗಳನ್ನು ಒದಗಿಸಲು ನಾವು ನಿಮ್ಮ ಕುರಿತಾದ ಅಥವಾ ನಿಮ್ಮ ಬಳಕೆಯ ಕುರಿತಾದ ಡೇಟಾವನ್ನು ಸಂಗ್ರಹಿಸುತ್ತೇವೆ. ನಾವು ಈ ಕೆಳಗಿನ ವಿಧಾನಗಳಲ್ಲಿ ಡೇಟಾವನ್ನು ಸಂಗ್ರಹಿಸುತ್ತೇವೆ:- ನಮ್ಮ ಅನೇಕ ಸೇವೆಗಳಿಗೆ ನೀವು SCL ನಲ್ಲಿ ಅಕೌಂಟ್‌ಗೆ ನೋಂದಣಿ/ಸೈನ್ ಅಪ್ ಮಾಡುವ ಅಗತ್ಯವಿರುತ್ತದೆ. ನೀವು ಅದನ್ನು ಮಾಡಿದಾಗ, ನಿಮ್ಮ ಅಕೌಂಟ್ ಅನ್ನು ರಚಿಸಲು/ ನವೀಕರಿಸಲು ನಿಮ್ಮ ಹೆಸರು, ಇಮೇಲ್ ವಿಳಾಸ, ಸಂಪರ್ಕ ಸಂಖ್ಯೆ, ದೇಶ, ವಿಳಾಸದಂತಹ ಆದರೆ ಅದಕ್ಕೆ ಸೀಮಿತವಾಗಿಲ್ಲದ ವೈಯಕ್ತಿಕ ಡೇಟಾವನ್ನು ನಾವು ಕೇಳುತ್ತೇವೆ. - ನೀವು ಕಾಲ್ ಬ್ಯಾಕ್ ಪಡೆಯಲು ಅಥವಾ ಹೆಚ್ಚಿನ ಮಾಹಿತಿ ಅಥವಾ ಹೆಚ್ಚಿನ ಸಹಾಯವನ್ನು ವಿನಂತಿಸಲು ಅಥವಾ ಹೊಸ ಲೋನ್‌ಗಳಿಗೆ ಅಪ್ಲೈ ಮಾಡಲು SCL ವೆಬ್‌ಸೈಟ್ ಬಳಸಿದಾಗ, ಹೆಸರು, ಇಮೇಲ್ ID ಮತ್ತು ಸಂಪರ್ಕ ಸಂಖ್ಯೆ ಸೇರಿದಂತೆ, ಆದರೆ ಅಷ್ಟಕ್ಕೆ ಸೀಮಿತವಾಗಿರದೇ ನಾವು ವೈಯಕ್ತಿಕ ಡೇಟಾವನ್ನು ಕೇಳುತ್ತೇವೆ. - ನಾವು ಅನುಸರಣೆಯ ಅಗತ್ಯ ಉದ್ದೇಶಗಳಿಗಾಗಿ ಹಣಕಾಸಿನ ವಿವರಗಳು- ಬ್ಯಾಂಕ್ ಸ್ಟೇಟ್ಮೆಂಟ್, ಸಂಬಳದ ಸ್ಟೇಟ್ಮೆಂಟ್, ಕುಟುಂಬದ ವಿವರಗಳು- ತಂದೆ, ತಾಯಿ, ಸಂಗಾತಿಯ ಹೆಸರುಗಳಂತಹ ಆದರೆ ಇಷ್ಟಕ್ಕೇ ಸೀಮಿತವಾಗಿರದ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಸಂಗ್ರಹಿಸಬಹುದು. - ನೀವು ಪ್ರತಿಕ್ರಿಯೆ ನೀಡಲು SCL ವೆಬ್‌ಸೈಟ್ ಅನ್ನು ಬಳಸಿದಾಗ, ಹೆಸರು, ಇಮೇಲ್ ID ಮತ್ತು ಸಂಪರ್ಕ ಸಂಖ್ಯೆ, ವಿಳಾಸ ಮತ್ತು ದೇಶವನ್ನು ಒಳಗೊಂಡಂತೆ ಆದರೆ ಅಷ್ಟಕ್ಕೆ ಸೀಮಿತವಾಗಿರದೇ ನಾವು ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ.- ನೀವು ಬಳಸುವ ಸೇವೆಗಳು ಮತ್ತು ನೀವು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಕುರಿತು ನಾವು ಡೇಟಾವನ್ನು ಸಂಗ್ರಹಿಸುತ್ತೇವೆ. ಈ ಡೇಟಾವು ಲಾಗ್ ಡೇಟಾ ಮತ್ತು ಲೊಕೇಶನ್ ಡೇಟಾವನ್ನು ಒಳಗೊಂಡಿರುತ್ತದೆ.- ಪ್ರಚಾರಗಳು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳ ಮೂಲಕ ನಾವು ನಿಮ್ಮ ಡೇಟಾವನ್ನು ಸಂಗ್ರಹಿಸಬಹುದು. - ನೀವು SCL ನೊಂದಿಗೆ ಸಂವಹನ ನಡೆಸಿದಾಗ ಅಥವಾ ಇತರ ಸದಸ್ಯರೊಂದಿಗೆ ಸಂವಹನ ನಡೆಸಲು SCL ಪ್ಲಾಟ್‌ಫಾರ್ಮ್ ಅನ್ನು ಬಳಸಿದಾಗ, ನಿಮ್ಮ ಸಂವಹನ ಮತ್ತು ನೀವು ಒದಗಿಸಲು ಆಯ್ಕೆಮಾಡುವ ಯಾವುದೇ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ. ಒಂದು ವೇಳೆ ನೀವು ಸಮ್ಮಾನ್ ಕ್ಯಾಪಿಟಲ್ ಅನ್ನು ಅಕ್ಸೆಸ್ ಮಾಡಲು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನೊಂದಿಗೆ ಸೈನ್ ಇನ್ ಮಾಡಲು ನೀವು ಆಯ್ಕೆ ಮಾಡಿದರೆ, ಅಥವಾ ಸಮ್ಮಾನ್ ಕ್ಯಾಪಿಟಲ್ ಸೇವೆಗಳೊಂದಿಗೆ ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ಕನೆಕ್ಟ್ ಮಾಡಲು, ಈ ಗೌಪ್ಯತಾ ಪಾಲಿಸಿಯ ಪ್ರಕಾರ, ನೀವು ಸೋಶಿಯಲ್ ಮೀಡಿಯಾ ಇಂಟರ್ಫೇಸ್ ಮೂಲಕ ನಮಗೆ ಲಭ್ಯವಾಗುವ ಡೇಟಾದ ಅನುಗುಣವಾಗಿ, ನೀವು ನಮ್ಮ ಕಲೆಕ್ಷನ್, ಸ್ಟೋರೇಜ್ ಮತ್ತು ಬಳಕೆಗೆ ಸಮ್ಮತಿಸುತ್ತೀರಿ. ನಿಮ್ಮ ಅಕೌಂಟ್ ಅನ್ನು ಕನೆಕ್ಟ್ ಮಾಡಲು ನೀವು ಆಯ್ಕೆ ಮಾಡುವಾಗ ನಿಮ್ಮ ಸೋಶಿಯಲ್ ಮೀಡಿಯಾ ಪೂರೈಕೆದಾರರು ಡೇಟಾವನ್ನು ಹೇಗೆ ಹಂಚಿಕೊಳ್ಳುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಅವರ ಗೌಪ್ಯತಾ ಪಾಲಿಸಿ ಮತ್ತು ಸಹಾಯ ಕೇಂದ್ರವನ್ನು ನೋಡಿ.

2. ನೀವು ನಮ್ಮ ಅಪ್ಲಿಕೇಶನ್‌ಗಳನ್ನು ಬಳಸಿದಾಗ ಸಂಗ್ರಹಿಸಲಾದ ಮಾಹಿತಿ

ನೀವು ನಮ್ಮ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದಾಗ ಅಥವಾ ನಮ್ಮ ಹೈಬ್ರಿಡ್ ಅಪ್ಲಿಕೇಶನ್ ಬಳಸಿದಾಗ (ನಮ್ಮ ಹಲವು ಸೇವೆಗಳಿಗೆ ಸಂಬಂಧಿಸಿದಂತೆ) ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸುತ್ತೇವೆ, ಆದರೆ ಇದು ಅಷ್ಟಕ್ಕೆ ಸೀಮಿತವಾಗಿರುವುದಿಲ್ಲ- ಹೆಸರು, ಇಮೇಲ್ ID, ವಿಳಾಸ, ದೇಶ/ನಗರ, ಮೊಬೈಲ್ ನಂಬರ್. ವ್ಯಕ್ತಿಗಳು ನಿರ್ದಿಷ್ಟವಾಗಿ ಸ್ವಯಂಪ್ರೇರಣೆಯಿಂದ ಅಂತಹ ಡೇಟಾವನ್ನು ಒದಗಿಸಿದ ಸಂದರ್ಭವನ್ನು ಹೊರತುಪಡಿಸಿ, ಸಮ್ಮಾನ್ ಕ್ಯಾಪಿಟಲ್ ವ್ಯಕ್ತಿಗಳ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವುದಿಲ್ಲ. ವೈಯಕ್ತಿಕ ಡೇಟಾದ ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆಯ ನಂತರ, ನಾವು ಸಾರ್ವಜನಿಕವಾಗಿ ಮತ್ತು ವಾಣಿಜ್ಯವಾಗಿ ಲಭ್ಯವಿರುವ ಮೂಲಗಳಿಂದ (ಕಾನೂನಿನಿಂದ ಅನುಮತಿಸಲಾದಂತೆ) ನಿಮ್ಮ ಕುರಿತಾದ ಡೇಟಾವನ್ನು ಪರಿಶೀಲಿಸಬಹುದು, ಸಂಗ್ರಹಿಸಬಹುದು ಅಥವಾ ಸ್ವೀಕರಿಸಬಹುದಾಗಿದ್ದು, ಅದನ್ನು ನಾವು ನಿಮ್ಮಿಂದ ಪಡೆಯುವ ಇತರ ಡೇಟಾದೊಂದಿಗೆ ಸಂಯೋಜಿಸಬಹುದು. ನೀವು ಈಗಾಗಲೇ ಆ ಸೇವೆಗಳೊಂದಿಗೆ ಸಂಪರ್ಕ ಹೊಂದಿದ್ದರೆ ಥರ್ಡ್ ಪಾರ್ಟಿ ಸೋಶಿಯಲ್ ನೆಟ್ವರ್ಕಿಂಗ್ ಸೇವೆಗಳಿಂದಲೂ ಕೂಡಾ ನಿಮ್ಮ ಕುರಿತಾದ ಡೇಟಾವನ್ನು ನಾವು ಪಡೆಯಬಹುದು.

ಪ್ರಕ್ರಿಯೆಯ ಕಾನೂನುಬದ್ಧ ಆಧಾರ

ನಾವು ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಬಹುದು. ಏಕೆಂದರೆ: ನಾವು ನಮ್ಮೊಂದಿಗೆ ಒಪ್ಪಂದವನ್ನು ಹೊಂದಿದ್ದೇವೆ. ಹಾಗೆ ಮಾಡಲು ನೀವು ನಮಗೆ ಸ್ಪಷ್ಟ ಅನುಮತಿಯನ್ನು ನೀಡಿದ್ದೀರಿ. ನೀವು ನಮ್ಮಿಂದ ಏನಾದರೂ ಖರೀದಿಸಿದ ನಂತರ ನಾವು ನಿಮಗೆ ಸೇವೆಗಳನ್ನು ಒದಗಿಸಿರಬೇಕು. ನಮ್ಮ ಆಫರ್‌ಗಳಲ್ಲಿ ಒಂದನ್ನು ನೀವು ಪಡೆದುಕೊಂಡಿರುವ ಕಾರಣ ನಾವು ನಿಮಗೆ ಸೇವೆಗಳನ್ನು ಒದಗಿಸಿರಬೇಕು. ಕಾನೂನನ್ನು ಅನುಸರಿಸಲು.

ವೈಯಕ್ತಿಕ ಡೇಟಾದ ಬಳಕೆ

ವಿವಾದಗಳನ್ನು ಪರಿಹರಿಸಲು, ಸಮಸ್ಯೆಗಳನ್ನು ಪರಿಹರಿಸಲು, ಸುರಕ್ಷಿತ ಸೇವೆಗಳನ್ನು ಉತ್ತೇಜಿಸಲು, ನಮ್ಮ ಸೇವೆಗಳಲ್ಲಿ ನಿಮ್ಮ ಆಸಕ್ತಿಯನ್ನು ಮೌಲ್ಯಮಾಪನ ಮಾಡಲು, ಆಫರ್‌ಗಳು, ಉತ್ಪನ್ನಗಳು, ಸೇವೆಗಳು, ಅಪ್ಡೇಟ್‌ಗಳು, ನಿಮ್ಮ ಅನುಭವವನ್ನು ಕಸ್ಟಮೈಜ್ ಮಾಡಲು, ದೋಷಗಳು, ವಂಚನೆ ಮತ್ತು ಇತರ ಕ್ರಿಮಿನಲ್ ಚಟುವಟಿಕೆಗಳ ವಿರುದ್ಧ ನಮ್ಮನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು, ನಮ್ಮ ನಿಯಮಗಳು ಮತ್ತು ಷರತ್ತುಗಳನ್ನು ಜಾರಿಗೊಳಿಸಲು ನಿಮಗೆ ಸ್ಪಷ್ಟವಾಗಿ ಕೋರಿಕೆ ಸಲ್ಲಿಸಲು ನಾವು ವೈಯಕ್ತಿಕ ಡೇಟಾವನ್ನು ಬಳಸುತ್ತೇವೆ.

ಸಮ್ಮಾನ್ ಕ್ಯಾಪಿಟಲ್ ಅಥವಾ ಅದರ ಗುಂಪು ಕಂಪನಿಗಳು ಕಾಲಕಾಲಕ್ಕೆ, ಪ್ರಾರಂಭಿಸಬಹುದಾದ ವಿವಿಧ ಸೇವೆಗಳು/ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಿಮಗೆ ಆಫರ್‌ಗಳನ್ನು ಕಳುಹಿಸಲು ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಕೂಡ ಬಳಸಬಹುದು. ಅಂತಹ ಯಾವುದೇ ಸಂವಹನವನ್ನು ನಾವು ನಿಮಗೆ ಕಳುಹಿಸುವ ಮೊದಲು ನಿಮ್ಮ ಸಮ್ಮತಿಯನ್ನು ತೆಗೆದುಕೊಳ್ಳಲಾಗುತ್ತದೆ.

ಐಚ್ಛಿಕ ಆನ್ಲೈನ್ ಸರ್ವೇಗಳನ್ನು ಪೂರ್ಣಗೊಳಿಸಲು ನಾವು ಕೆಲವೊಮ್ಮೆ ನಿಮ್ಮನ್ನು ಕೇಳಬಹುದು. ಈ ಸರ್ವೇಗಳು ನಿಮ್ಮನ್ನು ಸಂಪರ್ಕ ಮಾಹಿತಿ ಮತ್ತು ಡೆಮೋಗ್ರಾಫಿಕ್ ಮಾಹಿತಿಗಾಗಿ ಕೇಳಬಹುದು (ಜಿಪ್ ಕೋಡ್, ವಯಸ್ಸು, ಲಿಂಗ ಇತ್ಯಾದಿ). ಸಮ್ಮಾನ್ ಕ್ಯಾಪಿಟಲ್‌ನಲ್ಲಿ ನಿಮ್ಮ ಅನುಭವವನ್ನು ಕಸ್ಟಮೈಜ್ ಮಾಡಲು ನಾವು ಈ ಡೇಟಾವನ್ನು ಬಳಸುತ್ತೇವೆ. ಸರ್ವೇಗಳು ಐಚ್ಛಿಕವಾಗಿರುವುದರಿಂದ, ನೀವು ಒದಗಿಸುವ ಯಾವುದೇ ವೈಯಕ್ತಿಕ ಡೇಟಾವನ್ನು ನೀವು ಸ್ವಯಂಪ್ರೇರಿತವಾಗಿ ನೀಡಿರುತ್ತೀರಿ. ಅಂತಹ ಎಲ್ಲಾ ಡೇಟಾವನ್ನು ವೈಯಕ್ತಿಕ ಡೇಟಾದ ರಹಸ್ಯ ಮತ್ತು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಅನ್ವಯವಾಗುವ ಎಲ್ಲಾ ಕಾನೂನುಗಳಿಗೆ ಅನುಗುಣವಾಗಿ ಎನ್ಕ್ರಿಪ್ಟ್ ಮಾಡಿದ ರೀತಿಯಲ್ಲಿ ನಮ್ಮಿಂದ ಸಂಗ್ರಹಿಸಲಾಗುತ್ತದೆ ಮತ್ತು ಅಂತಹ ವೈಯಕ್ತಿಕ ಡೇಟಾವನ್ನು ಇಲ್ಲಿ ಪರಿಗಣಿಸಲಾಗಿರುವುದನ್ನು ಹೊರತುಪಡಿಸಿ ಬೇರೆ ರೀತಿಯಲ್ಲಿ ಹಂಚಿಕೊಳ್ಳಲಾಗುವುದಿಲ್ಲ ಅಥವಾ ಬಳಸಲಾಗುವುದಿಲ್ಲ.

ಕುಕೀಗಳು ಮತ್ತು ಇತರ ಟ್ರ್ಯಾಕಿಂಗ್ ತಂತ್ರಜ್ಞಾನಗಳು

ನಮ್ಮ ಕೆಲವು ವೆಬ್ ಪೇಜ್‌ಗಳು "ಕುಕೀಸ್" ಮತ್ತು ಇತರ ಟ್ರ್ಯಾಕಿಂಗ್ ತಂತ್ರಜ್ಞಾನಗಳನ್ನು ಬಳಸುತ್ತವೆ. "ಕುಕೀ" ಒಂದು ಸಣ್ಣ ಟೆಕ್ಸ್ಟ್ ಫೈಲ್ ಆಗಿದ್ದು, ಅದನ್ನು ಉದಾಹರಣೆಗೆ, ವೆಬ್‌ಸೈಟ್ ಚಟುವಟಿಕೆಯ ಬಗ್ಗೆ ಡೇಟಾವನ್ನು ಸಂಗ್ರಹಿಸಲು ಬಳಸಬಹುದು. ಕೆಲವು ಕುಕೀಗಳು ಮತ್ತು ಇತರ ತಂತ್ರಜ್ಞಾನಗಳು ಈ ಮೊದಲು ವೆಬ್ ಬಳಕೆದಾರರು ಸೂಚಿಸಿದ ವೈಯಕ್ತಿಕ ಡೇಟಾವನ್ನು ರಿಕಾಲ್ ಮಾಡಲು ಸೇವೆ ಸಲ್ಲಿಸಬಹುದು. ಹೆಚ್ಚಿನ ಬ್ರೌಸರ್‌ಗಳು ನಿಮಗೆ ಕುಕೀಗಳನ್ನು ನಿಯಂತ್ರಿಸಲು ಅವಕಾಶ ನೀಡುತ್ತವೆ, ಅವುಗಳನ್ನು ಅಂಗೀಕರಿಸಬೇಕೇ ಅಥವಾ ಇಲ್ಲವೇ ಮತ್ತು ಅವುಗಳನ್ನು ಹೇಗೆ ತೆಗೆದುಹಾಕಬೇಕು ಎಂಬುದನ್ನು ಒಳಗೊಂಡಿರುತ್ತವೆ. ನೀವು ಕುಕೀಯನ್ನು ಸ್ವೀಕರಿಸಿದರೆ ನಿಮಗೆ ಸೂಚಿಸಲು ಹೆಚ್ಚಿನ ಬ್ರೌಸರ್‌ಗಳನ್ನು ಸೆಟ್ ಮಾಡಬಹುದು, ಅಥವಾ ನಿಮ್ಮ ಬ್ರೌಸರ್‌ನೊಂದಿಗೆ ಕುಕೀಗಳನ್ನು ಬ್ಲಾಕ್ ಮಾಡಲು ನೀವು ಆಯ್ಕೆ ಮಾಡಬಹುದು, ಆದರೆ ನೀವು ನಿಮ್ಮ ಕುಕೀಗಳನ್ನು ಅಳಿಸಲು ಅಥವಾ ಬ್ಲಾಕ್ ಮಾಡಲು ಆಯ್ಕೆ ಮಾಡಿದರೆ, ವೆಬ್‌ಸೈಟ್‌ನ ಕೆಲವು ಭಾಗಗಳಿಗೆ ಅಕ್ಸೆಸ್ ಪಡೆಯಲು ನೀವು ನಿಮ್ಮ ಮೂಲ ಯೂಸರ್ ID ಮತ್ತು ಪಾಸ್ವರ್ಡನ್ನು ಮರು-ನಮೂದಿಸಬೇಕಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

ಟ್ರ್ಯಾಕಿಂಗ್ ತಂತ್ರಜ್ಞಾನಗಳು ಇಂಟರ್ನೆಟ್ ಡೊಮೇನ್ ಮತ್ತು ಹೋಸ್ಟ್ ಹೆಸರುಗಳು; ಇಂಟರ್ನೆಟ್ ಪ್ರೋಟೋಕಾಲ್ (IP) ವಿಳಾಸಗಳು; ಬ್ರೌಸರ್ ಸಾಫ್ಟ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್ ಪ್ರಕಾರಗಳು; ಕ್ಲಿಕ್‌ಸ್ಟ್ರೀಮ್ ಪ್ಯಾಟರ್ನ್‌ಗಳು; ಮತ್ತು ನಮ್ಮ ಸೈಟ್/ಅಪ್ಲಿಕೇಶನ್ ಅಕ್ಸೆಸ್ ಮಾಡುವ ದಿನಾಂಕಗಳು ಮತ್ತು ಸಮಯಗಳಂತಹ ಡೇಟಾವನ್ನು ರೆಕಾರ್ಡ್ ಮಾಡಬಹುದು. ನಮ್ಮ ಕುಕೀಗಳ ಬಳಕೆ ಮತ್ತು ಇತರ ಟ್ರ್ಯಾಕಿಂಗ್ ತಂತ್ರಜ್ಞಾನಗಳು ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ಗಳು ಮತ್ತು ನಿಮ್ಮ ವೆಬ್ ಅನುಭವವನ್ನು ಸುಧಾರಿಸಲು ನಮಗೆ ಅನುಮತಿ ನೀಡುತ್ತವೆ. ನಾವು ವೈಯಕ್ತಿಕ ಡೇಟಾವನ್ನು ಒಳಗೊಂಡಿರದ ಮಾಹಿತಿಯನ್ನು ಟ್ರೆಂಡ್‌ಗಳು ಮತ್ತು ಅಂಕಿ-ಅಂಶಗಳಿಗಾಗಿ ವಿಶ್ಲೇಷಿಸಬಹುದು.

ನಮ್ಮ ಕುಕೀಗಳ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಕುಕೀ ಪಾಲಿಸಿಯನ್ನು ನೋಡಿ

ಮಾಹಿತಿ ಹಂಚಿಕೆ ಮತ್ತು ಪ್ರಕಟಣೆ

ನಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಒದಗಿಸಲು, ಕಾರ್ಯನಿರ್ವಹಿಸಲು, ಅಭಿವೃದ್ಧಿಪಡಿಸಲು ಅಥವಾ ಸುಧಾರಿಸಲು ತಮ್ಮ ಉದ್ಯೋಗಗಳನ್ನು ಪೂರೈಸಲು ಡೇಟಾವನ್ನು ಸಮಂಜಸವಾಗಿ ತಿಳಿದುಕೊಳ್ಳಬೇಕಾಗಿದೆ ಎಂದು ನಾವು ನಂಬುವ ಉದ್ಯೋಗಿಗಳಿಗೆ ನಿಮ್ಮ ವೈಯಕ್ತಿಕ ಡೇಟಾಕ್ಕೆ ಪ್ರವೇಶವನ್ನು ನಿರ್ಬಂಧಿಸುತ್ತೇವೆ.

ಸಮ್ಮಾನ್ ಕ್ಯಾಪಿಟಲ್ ಬೇರೆಯವರೊಂದಿಗೆ ಅಥವಾ ಸಂಯೋಜಿತವಲ್ಲದ ಕಂಪನಿಗಳೊಂದಿಗೆ ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಬಾಡಿಗೆಗೆ ನೀಡುವುದಿಲ್ಲ, ಮಾರಾಟ ಮಾಡುವುದಿಲ್ಲ ಅಥವಾ ಹಂಚಿಕೊಳ್ಳುವುದಿಲ್ಲ: ನೀವು ವಿನಂತಿಸಿದ ಪ್ರಾಡಕ್ಟ್‌ಗಳು ಅಥವಾ ಸೇವೆಗಳನ್ನು ಒದಗಿಸಲು, ನಾವು ನಿಮ್ಮ ಅನುಮತಿಯನ್ನು ಹೊಂದಿದ್ದಾಗ, ಅಥವಾ ಈ ಕೆಳಗಿನ ಸಂದರ್ಭಗಳಲ್ಲಿ: ಗೌಪ್ಯತೆ ಒಪ್ಪಂದಗಳ ಅಡಿಯಲ್ಲಿ ಸಮ್ಮಾನ್ ಕ್ಯಾಪಿಟಲ್‌ನೊಂದಿಗೆ ಅಥವಾ ಪರವಾಗಿ ಕಾರ್ಯನಿರ್ವಹಿಸುವ ವಿಶ್ವಾಸಾರ್ಹ ಪಾಲುದಾರರಿಗೆ ನಾವು ಮಾಹಿತಿಯನ್ನು ಒದಗಿಸುತ್ತೇವೆ. ಸಮ್ಮಾನ್ ಕ್ಯಾಪಿಟಲ್ ಮತ್ತು ನಮ್ಮ ಮಾರ್ಕೆಟಿಂಗ್ ಪಾಲುದಾರರ ಆಫರ್‌ಗಳ ಬಗ್ಗೆ ನಿಮ್ಮೊಂದಿಗೆ ಸಂವಹನ ನಡೆಸುವುದಕ್ಕಾಗಿ ಸಮ್ಮಾನ್ ಕ್ಯಾಪಿಟಲ್‌ಗೆ ಸಹಾಯ ಮಾಡಲು ಈ ಕಂಪನಿಗಳು ನಿಮ್ಮ ವೈಯಕ್ತಿಕ ಡೇಟಾವನ್ನು ಬಳಸಬಹುದು. ಆದಾಗ್ಯೂ, ಈ ಡೇಟಾವನ್ನು ಹಂಚಿಕೊಳ್ಳಲು ಈ ಕಂಪನಿಗಳು ಯಾವುದೇ ಸ್ವತಂತ್ರ ಹಕ್ಕನ್ನು ಹೊಂದಿರುವುದಿಲ್ಲ.

ನಿಮ್ಮೊಂದಿಗೆ "ಅಗತ್ಯ" ಆಧಾರದ ಮೇಲೆ ಟ್ರಾನ್ಸಾಕ್ಷನ್‌ಗಳು ಅಥವಾ ಸಂವಹನಗಳ ಪ್ರಕ್ರಿಯೆಯನ್ನು ಸಕ್ರಿಯಗೊಳಿಸಲು ಸಮ್ಮಾನ್ ಕ್ಯಾಪಿಟಲ್ ಮತ್ತು/ಅಥವಾ ಅದರ ಗುಂಪು ಕಂಪನಿಗಳು/ಅಂಗಸಂಸ್ಥೆಗಳ ಏಜೆಂಟ್‌ಗಳು ಅಥವಾ ಗುತ್ತಿಗೆದಾರರಿಗೆ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಬಹಿರಂಗಪಡಿಸಬಹುದು. ನಮ್ಮ ಮಾರುಕಟ್ಟೆ, ಗ್ರಾಹಕರು, ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಮೌಲ್ಯಮಾಪನ ಮತ್ತು ವಿಶ್ಲೇಷಣೆಗೆ ಮತ್ತು ಜನರು ನಮ್ಮ ಸೇವೆಗಳನ್ನು ಬಳಸುವ ವಿಧಾನವನ್ನು ಅರ್ಥಮಾಡಿಕೊಳ್ಳಲು ಮತ್ತು ನಾವು ಅವುಗಳನ್ನು ಸುಧಾರಿಸಲು ಮತ್ತು ಹೊಸ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ನಿಮ್ಮ ಕುರಿತ ಮಾಹಿತಿಯನ್ನು ಮತ್ತಷ್ಟು ಬಳಸಬಹುದು. ಆದಾಗ್ಯೂ, ಏಜೆಂಟ್‌ಗಳು ಡೇಟಾವನ್ನು ಗೌಪ್ಯವಾಗಿ ಇರಿಸಬೇಕಾಗುತ್ತದೆ ಮತ್ತು ಸಮ್ಮಾನ್ ಕ್ಯಾಪಿಟಲ್ ಮತ್ತು/ಅಥವಾ ಅದರ ಗುಂಪು ಕಂಪನಿಗಳು/ಅಂಗಸಂಸ್ಥೆಗಳಿಗೆ ಅವರು ಮಾಡುತ್ತಿರುವ ಸೇವೆಗಳನ್ನು ನಿರ್ವಹಿಸಲು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಡೇಟಾವನ್ನು ಬಳಸುವುದಿಲ್ಲ.

ನಮ್ಮ ಇತರ ಘಟಕಗಳಿಂದ ಇತ್ತೀಚಿನ ಆಫರ್‌ಗಳ ಬಗ್ಗೆ ವಿವರಗಳನ್ನು ಒದಗಿಸಲು ನಾವು ಸಮ್ಮಾನ್ ಕ್ಯಾಪಿಟಲ್ ಗ್ರೂಪ್ ಮತ್ತು/ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ನಿಮ್ಮ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳಬಹುದು.

ಸಮ್ಮಾನ್ ಕ್ಯಾಪಿಟಲ್ ಮತ್ತು/ಅಥವಾ ಅದರ ಗುಂಪು ಕಂಪನಿಗಳು/ಅಂಗಸಂಸ್ಥೆಗಳು ಇತ್ಯಾದಿಗಳ ಹಕ್ಕುಗಳು ಅಥವಾ ಆಸ್ತಿಯನ್ನು ರಕ್ಷಿಸಲು ಅಗತ್ಯವಿರುವ ಕಾನೂನು ಹಕ್ಕುಗಳನ್ನು ಸ್ಥಾಪಿಸಲು ಅಥವಾ ಅದರಂತೆ ನಡೆದುಕೊಳ್ಳಲು ಅಥವಾ ಕಾನೂನು ಹಕ್ಕುಗಳನ್ನು ರಕ್ಷಿಸಲು ಉಪವಿಭಾಗಗಳು, ಕೋರ್ಟ್ ಆದೇಶಗಳು, ಸರ್ಕಾರಿ ಅಧಿಕಾರಿಗಳು ಅಥವಾ ಕಾನೂನು ಜಾರಿಗೊಳಿಸುವ ಅಧಿಕಾರಿಗಳಿಗೆ ನಾವು ಪ್ರತಿಕ್ರಿಯಿಸುತ್ತೇವೆ.

ಕಾನೂನುಬಾಹಿರ ಚಟುವಟಿಕೆಗಳು, ಶಂಕಿತ ವಂಚನೆ, ಯಾವುದೇ ವ್ಯಕ್ತಿಯ ದೈಹಿಕ ಸುರಕ್ಷತೆಗೆ ಸಂಭಾವ್ಯ ಬೆದರಿಕೆಗಳನ್ನು ಒಳಗೊಂಡ ಪರಿಸ್ಥಿತಿಗಳು, ಸಮ್ಮಾನ್ ಕ್ಯಾಪಿಟಲ್‌ನ ಬಳಕೆಯ ನಿಯಮಗಳ ಉಲ್ಲಂಘನೆಗಳು, ಅಥವಾ ಕಾನೂನಿಗೆ ಅಗತ್ಯವಿರುವಂತೆ ತನಿಖೆ ಮಾಡಲು, ತಡೆಯಲು ಅಥವಾ ಕ್ರಮ ತೆಗೆದುಕೊಳ್ಳಲು ಡೇಟಾವನ್ನು ಹಂಚಿಕೊಳ್ಳುವುದು ಅಗತ್ಯವಾಗಿದೆ ಎಂದು ನಾವು ನಂಬುತ್ತೇವೆ.

ಸಮ್ಮಾನ್ ಕ್ಯಾಪಿಟಲ್ ಅನ್ನು ಬೇರೊಂದು ಕಂಪನಿಯು ಸ್ವಾಧೀನಪಡಿಸಿಕೊಂಡರೆ ಅಥವಾ ವಿಲೀನಗೊಳಿಸಿದರೆ ನಾವು ನಿಮ್ಮ ಕುರಿತಾದ ಡೇಟಾವನ್ನು ವರ್ಗಾಯಿಸುತ್ತೇವೆ. ಈ ಸಂದರ್ಭದಲ್ಲಿ, ನಿಮ್ಮ ಡೇಟಾವನ್ನು ಟ್ರಾನ್ಸ್‌ಫರ್ ಮಾಡುವ ಮೊದಲು ಸಮ್ಮಾನ್ ಕ್ಯಾಪಿಟಲ್ ನಿಮಗೆ ಸೂಚಿಸುತ್ತದೆ ಮತ್ತು ಅದು ಬೇರೆ ಗೌಪ್ಯತಾ ಪಾಲಿಸಿಯ ಅನುಸರಣೆಗೆ ಒಳಪಟ್ಟಿರುತ್ತದೆ.

ಅಂತಾರಾಷ್ಟ್ರೀಯ ಡೇಟಾ ವರ್ಗಾವಣೆಗೆ ಒಪ್ಪಿಗೆ

ನಮ್ಮ ಯಾವುದೇ ಸೇವೆಗಳಲ್ಲಿ ನೀವು ಬಳಸಿದಾಗ ಅಥವಾ ಭಾಗವಹಿಸಿದಾಗ ಮತ್ತು/ಅಥವಾ ನಿಮ್ಮ ವಿವರಗಳನ್ನು ನಮಗೆ ಒದಗಿಸಿದಾಗ, ಈ ಗೌಪ್ಯತಾ ಪಾಲಿಸಿಯೊಂದಿಗೆ ಸ್ಥಿರವಾದ ಪ್ರಕ್ರಿಯೆಗಾಗಿ ನಿಮ್ಮ ಡೇಟಾವನ್ನು ಭಾರತದ ಹೊರಗೆ ವರ್ಗಾಯಿಸಬಹುದು. ನಿಮ್ಮ ಡೇಟಾವನ್ನು ವರ್ಗಾಯಿಸಬಹುದಾದ ದೇಶಗಳ ಡೇಟಾ ರಕ್ಷಣಾ ಕಾನೂನುಗಳು ಭಾರತದ ಕನಿಷ್ಠ ಅದೇ ಮಟ್ಟದಲ್ಲಿರುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ.

ಒಂದು ವೇಳೆ ಯುರೋಪಿಯನ್ ಯೂನಿಯನ್‌ನಲ್ಲಿ (EU) ನಿಮ್ಮ ಡೇಟಾವನ್ನು ಮೊದಲು ಪ್ರಕ್ರಿಯೆಗೊಳಿಸಿದರೆ, ಈ ಗೌಪ್ಯತಾ ಪಾಲಿಸಿಯೊಂದಿಗೆ ಸ್ಥಿರವಾಗಿ ಪ್ರಕ್ರಿಯೆಗೊಳಿಸಲು EU ನಿಂದ ಹೊರಗೆ ಸಮ್ಮಾನ್ ಕ್ಯಾಪಿಟಲ್ ಗುಂಪು ಕಂಪನಿಗಳು, ಅಂಗಸಂಸ್ಥೆಗಳು ಮತ್ತು/ಅಥವಾ ವಿಶ್ವಾಸಾರ್ಹ ಪಾಲುದಾರರೊಂದಿಗೆ ಹಂಚಿಕೊಳ್ಳಲು ವರ್ಗಾಯಿಸಬಹುದು. ಆದಾಗ್ಯೂ, ನಿಮ್ಮ ವರ್ಗಾವಣೆಯಾದ ಡೇಟಾವನ್ನು ರಕ್ಷಿಸಲು ಸೂಕ್ತ ರಕ್ಷಣಾತ್ಮಕ ಕ್ರಮಗಳು ಅಸ್ತಿತ್ವದಲ್ಲಿರುವಾಗ ಮಾತ್ರ ಅಂತಹ ವರ್ಗಾವಣೆಗಳನ್ನು ಮಾಡಲಾಗುತ್ತದೆ (ಉದಾ: – ಡೇಟಾವನ್ನು ಹಂಚಿಕೊಳ್ಳುವ ಆಯಾ ಘಟಕಗಳೊಂದಿಗೆ ಒಪ್ಪಂದದ ಷರತ್ತುಗಳು).

ಸೇವೆಗಳ ಮೇಲೆ ಥರ್ಡ್-ಪಾರ್ಟಿ ಲಿಂಕ್‌ಗಳು ಮತ್ತು ಕಂಟೆಂಟ್

ನಮ್ಮ ಸೇವೆಗಳು ನಮ್ಮ ನಿಯಂತ್ರಣದ ಹೊರಗಿರುವ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು/ಅಪ್ಲಿಕೇಶನ್‌ಗಳು ಮತ್ತು ಸೇವೆಗಳಿಗೆ ಲಿಂಕ್ ಆಗಬಹುದು. ಇದಲ್ಲದೆ, ಸಮ್ಮಾನ್ ಕ್ಯಾಪಿಟಲ್, ಅದರ ಗುಂಪು ಕಂಪನಿಗಳು, ಅದರ ಅಂಗಸಂಸ್ಥೆಗಳು ಮತ್ತು ಅವರ ನಿರ್ದೇಶಕರು ಮತ್ತು ಉದ್ಯೋಗಿಗಳು ನಿಮ್ಮ ಯಾವುದೇ ಅಪ್ಲಿಕೇಶನ್ ಅಥವಾ ಯಾವುದೇ ಸೈಟ್ ಅಥವಾ ಯಾವುದೇ ಪಾರ್ಟಿಯಿಂದ ಬಳಸಲು ಅಸಮರ್ಥತೆ, (ವಿಶೇಷ, ಪ್ರಾಸಂಗಿಕ ಅಥವಾ ಪರಿಣಾಮವಾಗಿ, ದಂಡನೀಯ ಅಥವಾ ಅನುಕರಣೀಯ ನಷ್ಟ, ಹಾನಿ ಅಥವಾ ವೆಚ್ಚಗಳು ಸೇರಿದಂತೆ) ಯಾವುದರ ಮೇಲೆ ಎದುರಾದರೂ ಮತ್ತು ಯಾವುದೇ ದೋಷ, ಡ್ಯಾಮೇಜ್, ಲೋಪದಿಂದ ಉಂಟಾಗುವ ಯಾವುದೇ ನಷ್ಟ, ಹಾನಿ ಅಥವಾ ವೆಚ್ಚವನ್ನು ಒಳಗೊಂಡಂತೆ, ಆದರೆ ಅದಕ್ಕೆ ಮಾತ್ರ ಸೀಮಿತವಾಗಿರದೆ, ಯಾವುದೇ ಆನ್‌ಲೈನ್ ಅಪ್ಲಿಕೇಶನ್, ಅದರ ಕಂಟೆಂಟ್‌ಗಳು (ಮೆಟೀರಿಯಲ್, ಡೇಟಾ, ಮನಿ ಮಾರ್ಕೆಟ್ ಏರಿಳಿತಗಳು, ಸುದ್ದಿ ಐಟಂಗಳು, ಇತ್ಯಾದಿ) ಅಥವಾ ಸಂಬಂಧಿತ ಸೇವೆಗಳೊಂದಿಗೆ ಅಡಚಣೆ, ಅಪೂರ್ಣತೆ, ದೋಷ, ತಪ್ಪು ಅಥವಾ ಅಸಮರ್ಪಕತೆ ಅಥವಾ ನಷ್ಟಗಳು ಅಥವಾ ವೆಚ್ಚಗಳ ಸಾಧ್ಯತೆಯ ಬಗ್ಗೆ ಸಮ್ಮಾನ್ ಕ್ಯಾಪಿಟಲ್ ಸಲಹೆ ನೀಡಿದ್ದರೂ ಸಹ ಯಾವುದೇ ಅಪ್ಲಿಕೇಶನ್ ಅಥವಾ ಅದರ ಯಾವುದೇ ಭಾಗ ಅಥವಾ ಯಾವುದೇ ಕಂಟೆಂಟ್‌ಗಳ ಅಲಭ್ಯತೆಯಿಂದಾಗಿ ಅಥವಾ ಸಂಬಂಧಿಸಿದ ಸೇವೆಗಳ ಅಂತಹ ಹಾನಿಗಳಿಗೆ ಯಾವುದೇ ಹೊಣೆಗಾರಿಕೆಯನ್ನು ಸ್ವೀಕರಿಸುವುದಿಲ್ಲ ಮತ್ತು ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ಜವಾಬ್ದಾರರಾಗಿರುವುದಿಲ್ಲ.

ಅಪ್ರಾಪ್ತರು

ಸೈಟ್/ಅಪ್ಲಿಕೇಶನ್ ಬಳಸಲು ನೀವು ಕನಿಷ್ಟ ವಯಸ್ಸನ್ನು ದಾಟಿರಬೇಕು (ಕೆಳಗಿನ ಈ ಪ್ಯಾರಾಗ್ರಾಫ್‌ನಲ್ಲಿ ವಿವರಿಸಲಾಗಿದೆ) ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು ಎಂದು ನೀವು ಒಪ್ಪುತ್ತೀರಿ. ಈ ಉದ್ದೇಶಗಳಿಗಾಗಿ ಕನಿಷ್ಠ ವಯಸ್ಸು 16 ಆಗಿರುತ್ತದೆ, ಆದಾಗ್ಯೂ ಸ್ಥಳೀಯ ಕಾನೂನುಗಳಿಗೆ ಅಗತ್ಯವಿದ್ದರೆ, ಸಮ್ಮಾನ್ ಕ್ಯಾಪಿಟಲ್ ನಿಮಗೆ ಸೈಟ್/ಅಪ್ಲಿಕೇಶನ್‌ನಲ್ಲಿ ಕಾನೂನುಬದ್ಧವಾಗಿ ಸೇವೆಗಳನ್ನು ಒದಗಿಸಲು ನೀವು ವಯಸ್ಕರಾಗಿಬೇಕು ಎಂಬುದಾಗಿದ್ದರೆ ಆ ವಯಸ್ಕ ವಯಸ್ಸು ಅನ್ವಯವಾಗುವ ಕನಿಷ್ಠ ವಯಸ್ಸಿನಂತೆ ಅನ್ವಯಿಸುತ್ತದೆ. ಯುರೋಪಿಯನ್ ಯೂನಿಯನ್‌ನ ಹೊರಗಿನ ಎಲ್ಲಾ ನ್ಯಾಯವ್ಯಾಪ್ತಿಗಳಲ್ಲಿ, ನೀವು 18 ವರ್ಷಕ್ಕಿಂತ ಅಥವಾ ನಿಮ್ಮ ನ್ಯಾಯವ್ಯಾಪ್ತಿಯಲ್ಲಿನ ವಯಸ್ಕ ವಯಸ್ಸಿಗಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನಿಮ್ಮ ಪೋಷಕರು, ಕಾನೂನು ಪಾಲಕರು ಅಥವಾ ಜವಾಬ್ದಾರಿಯುತ ವಯಸ್ಕರ ಮೇಲ್ವಿಚಾರಣೆಯಲ್ಲಿ ನೀವು ಸಮ್ಮಾನ್ ಕ್ಯಾಪಿಟಲ್ ಅನ್ನು ಬಳಸಬೇಕು.

ಡೇಟಾ ರಿಟೆನ್ಶನ್

ಸಮ್ಮಾನ್ ಕ್ಯಾಪಿಟಲ್‌ನಿಂದ ಪ್ರಕ್ರಿಯೆಗೊಳಿಸಲಾದ ನಿಮ್ಮ ವೈಯಕ್ತಿಕ ಡೇಟಾವನ್ನು ಅನ್ವಯವಾಗುವ ಕಾನೂನು, ನಿಯಂತ್ರಕ, ಒಪ್ಪಂದ ಅಥವಾ ಶಾಸನಬದ್ಧ ಕಟ್ಟುಪಾಡುಗಳಿಗೆ ಅನುಗುಣವಾಗಿ ವೈಯಕ್ತಿಕ ಡೇಟಾವನ್ನು ಸಂಸ್ಕರಿಸುವ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿದ್ದು, ಅಗತ್ಯಕ್ಕಿಂತ ಹೆಚ್ಚು ಕಾಲ ನಿಮ್ಮ ಗುರುತನ್ನು ಬಳಸಲು ಅನುಮತಿ ಇರುವುದಿಲ್ಲ.

ಅಂತಹ ಅವಧಿಗಳ ಮುಕ್ತಾಯದಲ್ಲಿ, ಕಾನೂನು/ಒಪ್ಪಂದದ ಧಾರಣೆ ಜವಾಬ್ದಾರಿಗಳನ್ನು ಅನುಸರಿಸಲು ಅಥವಾ ಅನ್ವಯವಾಗುವ ಶಾಸನಬದ್ಧ ಮಿತಿಯ ಅವಧಿಗಳಿಗೆ ಅನುಗುಣವಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ಡಿಲೀಟ್ ಮಾಡಲಾಗುತ್ತದೆ ಅಥವಾ ಆರ್ಕೈವ್ ಮಾಡಲಾಗುತ್ತದೆ.

ನಿಮ್ಮ ಮಾಹಿತಿಯ ಮೇಲೆ ನಿಯಂತ್ರಣ

ಯೂರೋಪಿಯನ್ ಒಕ್ಕೂಟದ ಸಾಮಾನ್ಯ ಡೇಟಾ ರಕ್ಷಣಾ ನಿಯಂತ್ರಣಕ್ಕೆ ಅನುಗುಣವಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ನಾವು ನಿಮಗೆ ಒದಗಿಸುತ್ತೇವೆ. ಇದು ನಿಮ್ಮ ಡೇಟಾವನ್ನು ಅಕ್ಸೆಸ್ ಮಾಡುವ, ಮಾರ್ಪಾಡು ಮಾಡುವ, ಅಳಿಸುವ, ನಿರ್ಬಂಧಿಸುವ, ಪ್ರಸಾರ ಮಾಡುವ ಅಥವಾ ಕೆಲವು ಬಳಕೆಗಳಿಗೆ ಆಕ್ಷೇಪಿಸುವ ಹಕ್ಕನ್ನು ಒಳಗೊಂಡಿದೆ.

ನಿಮ್ಮ ಪ್ರೊಫೈಲ್ ಮತ್ತು ಸಂಬಂಧಿತ ವೈಯಕ್ತಿಕ ಡೇಟಾವನ್ನು ಯಾವುದೇ ಸಮಯದಲ್ಲಿ ಅಪ್ಡೇಟ್ ಮಾಡುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ. ಅಲ್ಲದೆ, ನೀವು ವೆಬ್‌ಸೈಟ್/ಅಪ್ಲಿಕೇಶನ್‌ಗಳು ಅಥವಾ ಸೇವೆಯ ಮೂಲಕ ಸಂಗ್ರಹಿಸಲಾದ ನಿಮ್ಮ ವೈಯಕ್ತಿಕ ಡೇಟಾವನ್ನು privacy@sammaancapital.com ಗೆ ಇಮೇಲ್ ಮಾಡುವ ಮೂಲಕ ಪರಿಶೀಲಿಸಬಹುದು, ಅಪ್ಡೇಟ್ ಮಾಡಬಹುದು, ಸರಿಪಡಿಸಬಹುದು, ಅಳಿಸಬಹುದು ಅಥವಾ ಆಕ್ಷೇಪಿಸಬಹುದು

ನಿಮ್ಮ ವೈಯಕ್ತಿಕ ಮಾಹಿತಿಯ ಅಕ್ಸೆಸ್ ಅಥವಾ ತಿದ್ದುಪಡಿಗೆ ಸಂಬಂಧಿಸಿದ ಗೌಪ್ಯತಾ ಕಳಕಳಿಗಳನ್ನು ನೀವು ಹೊಂದಿದ್ದರೆ, ದಯವಿಟ್ಟು ಈ ಪಾಲಿಸಿಯ "ಡೇಟಾ ಗೌಪ್ಯತಾ ಸಮಸ್ಯೆಗಳು ಮತ್ತು ಯಾರನ್ನು ಸಂಪರ್ಕಿಸಬೇಕು" ಎಂಬ ವಿಭಾಗದೊಳಗೆ ನಮೂದಿಸಿದ ಸಂಪರ್ಕ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ.

ನಿಮ್ಮ ಕೋರಿಕೆಯಲ್ಲಿ, ನೀವು ಯಾವ ವೈಯಕ್ತಿಕ ಡೇಟಾವನ್ನು ಬದಲಾಯಿಸಲು ಬಯಸುತ್ತೀರಿ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ, ನಮ್ಮ ಡೇಟಾಬೇಸ್‌ನಿಂದ ನೀವು ನಮಗೆ ಒದಗಿಸಿದ ನಿಮ್ಮ ವೈಯಕ್ತಿಕ ಡೇಟಾವನ್ನು ನೀವು ಪಡೆಯಲು ಬಯಸುತ್ತೀರಾ ಅಥವಾ ನೀವು ನಮಗೆ ಒದಗಿಸಿದ ನಿಮ್ಮ ವೈಯಕ್ತಿಕ ಡೇಟಾದ ನಮ್ಮ ಬಳಕೆಯ ಮೇಲೆ ನೀವು ಯಾವ ಮಿತಿಗಳನ್ನು ಹೇರಲು ಬಯಸುತ್ತೀರಿ ಎಂಬುದನ್ನು ನಮಗೆ ತಿಳಿಸಿ.

ಅಕ್ಸೆಸ್ ಅಥವಾ ಕೋರಿಕೆಗಳಿಗೆ ಸಂಬಂಧಿಸಿದ ಹೆಚ್ಚಿನ ಪ್ರಶ್ನೆಗಳು ಮತ್ತು ಸಮಸ್ಯೆಗಳನ್ನು ತ್ವರಿತವಾಗಿ ನಿರ್ವಹಿಸಬಹುದಾದರೆ, ಸಂಕೀರ್ಣ ಕೋರಿಕೆಗಳು ಹೆಚ್ಚು ಸಂಶೋಧನೆ ಮತ್ತು ಸಮಯವನ್ನು ತೆಗೆದುಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ, ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ, ಅಥವಾ ಸಮಸ್ಯೆಯ ಸ್ವರೂಪ ಮತ್ತು ಮುಂದಿನ ಹಂತಗಳ ಬಗ್ಗೆ 30 ದಿನಗಳ ಒಳಗೆ ನಿಮ್ಮನ್ನು ಸಂಪರ್ಕಿಸಲಾಗುತ್ತದೆ.

ಭದ್ರತೆ ಮತ್ತು ಗೌಪ್ಯತೆ

ಸಮ್ಮಾನ್ ಕ್ಯಾಪಿಟಲ್ ನಿಮ್ಮ ವೈಯಕ್ತಿಕ ಡೇಟಾವನ್ನು ಸಂರಕ್ಷಿಸುವ ಮತ್ತು ಕಾಪಾಡುವ ಉದ್ದೇಶಕ್ಕಾಗಿ ಸಮಂಜಸವಾದ ಭದ್ರತಾ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳನ್ನು (ತಕ್ಕುದಾದ, ಕಾರ್ಯಾಚರಣೆಯ, ಭೌತಿಕ ಮತ್ತು ತಾಂತ್ರಿಕ) ಅನುಷ್ಠಾನಗೊಳಿಸಲು ಎಲ್ಲಾ ಸಮಯದಲ್ಲೂ ಸಮ್ಮಾನ್ ಕ್ಯಾಪಿಟಲ್‌ಗೆ ಪ್ರಮುಖ ಅಗತ್ಯತೆಯಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ಸಮ್ಮಾನ್ ಕ್ಯಾಪಿಟಲ್‌ನಲ್ಲಿ, ನೀವು ನಮಗೆ ಸಲ್ಲಿಸುವ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ರಕ್ಷಿಸಲು ನಾವು ಸಂಪೂರ್ಣ ಬದ್ಧರಾಗಿದ್ದೇವೆ.

ನೀವು ನಮ್ಮೊಂದಿಗೆ ಹಂಚಿಕೊಳ್ಳುವ ಯಾವುದೇ ಡೇಟಾದ ಭದ್ರತೆ ಮತ್ತು ಗೌಪ್ಯತೆಯ ಸುರಕ್ಷತೆಯನ್ನು ಸಮ್ಮಾನ್ ಕ್ಯಾಪಿಟಲ್ ಖಚಿತಪಡಿಸುತ್ತದೆ. ನಾವು ಪಡೆದ ನಿಮ್ಮ ಯಾವುದೇ ವೈಯಕ್ತಿಕವಾಗಿ ಗುರುತಿಸಬಹುದಾದ ಡೇಟಾವನ್ನು ನೀವು ಒಪ್ಪಿಕೊಳ್ಳುವ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಕಾರಣಗಳಿಗೆ ಬಳಸಲಾಗುವುದಿಲ್ಲ ಅಥವಾ ಹಂಚಿಕೊಳ್ಳಲಾಗುವುದಿಲ್ಲ. ಆದಾಗ್ಯೂ, ನಿಮ್ಮ ವೈಯಕ್ತಿಕ ಡೇಟಾವನ್ನು ರಕ್ಷಿಸಲು ನಮ್ಮ ಅತ್ಯಂತ ಪ್ರಯತ್ನಗಳ ಹೊರತಾಗಿಯೂ, ಸಮ್ಮಾನ್ ಕ್ಯಾಪಿಟಲ್ ನಮ್ಮ ಆನ್ಲೈನ್ ಸೇವೆಗಳು/ಅಪ್ಲಿಕೇಶನ್‌ಗಳ ಮೂಲಕ ನೀವು ನಮಗೆ ಪ್ರಸರಣ ಮಾಡುವ ಯಾವುದೇ ಡೇಟಾದ ಭದ್ರತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಈ ಗೌಪ್ಯತಾ ಪಾಲಿಸಿಯನ್ನು ಅಂಗೀಕರಿಸುವ ಮೂಲಕ, ನಿಮ್ಮ ವೈಯಕ್ತಿಕ ಡೇಟಾದ ಅಂತಹ ಪ್ರಸರಣವನ್ನು ನಿಮ್ಮ ಸ್ವಂತ ಅಪಾಯದಲ್ಲಿ ಮಾಡಲಾಗುತ್ತದೆ ಎಂದು ನೀವು ಅಂಗೀಕರಿಸುತ್ತೀರಿ.

ಕೊನೆಯದಾಗಿ, ನಮ್ಮ ಯಾವುದೇ ಸೇವೆಗಳಿಗೆ ನೀವು ಬಳಸುವ ಯೂಸರ್‌ನೇಮ್ ಮತ್ತು ಪಾಸ್ವರ್ಡ್‌ನ ರಹಸ್ಯವನ್ನು ನಿರ್ವಹಿಸುವ ಮೂಲಕ ನಿಮ್ಮ ಡೇಟಾ ಗೌಪ್ಯತೆಯನ್ನು ರಕ್ಷಿಸಲು ನಮಗೆ ಸಹಾಯ ಮಾಡುವಂತೆ ನಿಮ್ಮನ್ನು ಕೋರಲಾಗಿದೆ.

ಸೋಶಿಯಲ್ ಮೀಡಿಯಾ

ಗ್ರಾಹಕರೊಂದಿಗೆ ತಿಳಿಸಲು, ಸಹಾಯ ಮಾಡಲು ಮತ್ತು ತೊಡಗಿಸಿಕೊಳ್ಳಲು ಸಮ್ಮಾನ್ ಕ್ಯಾಪಿಟಲ್ ಕೆಲವು ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಚಾನೆಲ್‌ಗಳು, ಪುಟಗಳು ಮತ್ತು ಅಕೌಂಟ್‌ಗಳನ್ನು ನಿರ್ವಹಿಸುತ್ತದೆ. ಸಮ್ಮಾನ್ ಕ್ಯಾಪಿಟಲ್ ತನ್ನ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಸುಧಾರಿಸಲು ಸಮ್ಮಾನ್ ಕ್ಯಾಪಿಟಲ್ ಬಗ್ಗೆ ಈ ಚಾನೆಲ್‌ಗಳ ಮೇಲೆ ಮಾಡಲಾದ ಕಾಮೆಂಟ್‌ಗಳು ಮತ್ತು ಪೋಸ್ಟ್‌ಗಳನ್ನು ಮಾನಿಟರ್ ಮಾಡುತ್ತದೆ ಮತ್ತು ರೆಕಾರ್ಡ್ ಮಾಡುತ್ತದೆ.

ಈ ಕೆಳಗಿನ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೀವು ಸಮ್ಮಾನ್ ಕ್ಯಾಪಿಟಲ್‌ಗೆ ತಿಳಿಸಬಾರದು ಎಂಬುದನ್ನು ದಯವಿಟ್ಟು ಗಮನಿಸಿ:

  • sensitive personal data including (i) special categories of personal data meaning any data revealing racial or ethnic origin, political opinions, religious or philosophical beliefs, or trade union membership, and the processing of genetic data, biometric data for the purpose of uniquely identifying a natural person, data concerning health or data concerning a natural person's sex life or sexual orientation and (ii) other sensitive personal data such as criminal convictions and offences and national identification number ;
  • Excessive, inappropriate, offensive or insulting information towards individuals.

ಸಮ್ಮಾನ್ ಕ್ಯಾಪಿಟಲ್ ತನ್ನ ಪರವಾಗಿ ತನ್ನ ಉದ್ಯೋಗಿಗಳು ಪೋಸ್ಟ್ ಮಾಡಿದ ಮಾಹಿತಿಯನ್ನು ಹೊರತುಪಡಿಸಿ ಆ ಸೈಟ್‌ಗಳಲ್ಲಿ ಪೋಸ್ಟ್ ಮಾಡಿದ ಯಾವುದೇ ಮಾಹಿತಿಗೆ ಜವಾಬ್ದಾರರಾಗಿರುವುದಿಲ್ಲ. ಅಂತಹ ಸೈಟ್‌ಗಳ ಮೂಲಕ ಪಡೆದ ವೈಯಕ್ತಿಕ ಡೇಟಾದ ಸ್ವಂತ ಬಳಕೆಗೆ ಸಮ್ಮಾನ್ ಕ್ಯಾಪಿಟಲ್ ಮಾತ್ರ ಜವಾಬ್ದಾರರಾಗಿರುತ್ತದೆ.

ಸಮ್ಮತಿ

ಒಪ್ಪಿಗೆ ಎಂಬುದನ್ನು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಡೇಟಾ ಬಳಕೆಯನ್ನು "ಆಯ್ಕೆ ಮಾಡುವ" ಅಥವಾ "ಆಯ್ಕೆಯಿಂದ ಹೊರಗುಳಿಯಲು" ವ್ಯಕ್ತಿಯ ಇಚ್ಛೆ ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ವ್ಯಕ್ತಿಯು ಅವರ ವೈಯಕ್ತಿಕ ಡೇಟಾದ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡಿರುವುದನ್ನು ಮತ್ತು ದೃಢೀಕರಿಸುವುದನ್ನು "ಚೆಕ್ ಬಾಕ್ಸ್" ಅಥವಾ ಸಹಿಯ ಮೂಲಕ ಪಡೆಯಲಾಗುತ್ತದೆ. ಕೆಲವೊಮ್ಮೆ, ಡೇಟಾ ಪ್ರಕ್ರಿಯೆ ಚಟುವಟಿಕೆಯ ಆಧಾರದ ಮೇಲೆ ನಿಮ್ಮಿಂದ ಸ್ಪಷ್ಟ ಲಿಖಿತ ಸಮ್ಮತಿಯ ಅಗತ್ಯತೆ ಉಂಟಾಗಬಹುದು. ಅಗತ್ಯವಿದ್ದಾಗ, ನಾವು ಈ ಚಟುವಟಿಕೆಗಳಿಗೂ ಮೊದಲು ನಿಮ್ಮಿಂದ ಒಪ್ಪಿಗೆಯನ್ನು ಪಡೆದುಕೊಳ್ಳುತ್ತೇವೆ: ಸೂಕ್ಷ್ಮ ವೈಯಕ್ತಿಕ ಡೇಟಾವನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ಡೇಟಾವನ್ನು ಕೆಲವು ವಿಧಾನಗಳಲ್ಲಿ ಸಂಗ್ರಹಿಸುವುದು, ಬಳಸುವುದು ಅಥವಾ ಪ್ರಕ್ರಿಯೆಗೊಳಿಸುವುದು, ಅಥವಾ ಯಾವುದೇ ಥರ್ಡ್ ಪಾರ್ಟಿಯೊಂದಿಗೆ ನಿಮ್ಮ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳುವುದು (ಸಂವೇದನಾತ್ಮಕ ವೈಯಕ್ತಿಕ ಡೇಟಾ ಎಂಬುದು ನಿಮ್ಮ ಜಾತಿ ಅಥವಾ ಸಾಂಪ್ರದಾಯಿಕ ಮೂಲ, ರಾಜಕೀಯ ಅಭಿಪ್ರಾಯಗಳು, ಧಾರ್ಮಿಕ ಅಥವಾ ತತ್ವಜ್ಞಾನದ ನಂಬಿಕೆಗಳು, ಟ್ರೇಡ್ ಯೂನಿಯನ್ ಸದಸ್ಯತ್ವ, ಆನುವಂಶಿಕ ಡೇಟಾ, ಬಯೋಮೆಟ್ರಿಕ್ ಡೇಟಾ, ಆರೋಗ್ಯಕ್ಕೆ ಸಂಬಂಧಿಸಿದ ಅಥವಾ ಲೈಂಗಿಕ ಜೀವನ ಅಥವಾ ಲೈಂಗಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಡೇಟಾ ಆಗಿದೆ); ನಿಮ್ಮ ನಿವಾಸದ ದೇಶದ ಹೊರಗೆ ನಿಮ್ಮ ವೈಯಕ್ತಿಕ ಡೇಟಾವನ್ನು ವರ್ಗಾಯಿಸುವುದು ; ನಿಮ್ಮ ಕಂಪ್ಯೂಟರ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ವೆಬ್ ಕುಕೀಗಳನ್ನು ಬಳಸುವುದು ಅಥವಾ ಸೇರಿಸುವುದು.

ನೀವು ಹೊರಗುಳಿಯಲು ಬಯಸುವಿರಾ

ನಿಮ್ಮ ಸಂಪರ್ಕ ಮಾಹಿತಿಯನ್ನು ನಾವು ಹೊಂದಿದ್ದರೆ, ಇಮೇಲ್ ಮೂಲಕ ನಮ್ಮ ಪ್ರಾಡಕ್ಟ್‌ಗಳು, ಸೇವೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ನಿಮಗೆ ಮಾಹಿತಿ ನೀಡಲು ನಾವು ಬಯಸಬಹುದು. ನೀವು ಸಮ್ಮಾನ್ ಕ್ಯಾಪಿಟಲ್ ಕುರಿತಾದ ಸುದ್ದಿಗಳು ಮತ್ತು ಸೇವೆಗಳ ಇತ್ತೀಚಿನ ಮಾಹಿತಿಯೊಂದಿಗೆ ಅಪ್ ಟು ಡೇಟ್ ಆಗಿರಲು ಮತ್ತು ಅಂತಹ ಮಾರ್ಕೆಟಿಂಗ್ ವಿಷಯಗಳನ್ನು ಪಡೆಯಲು ಬಯಸದಿದ್ದರೆ, ದಯವಿಟ್ಟು unsubscribe@sammaancapital.com ಗೆ ಇಮೇಲ್ ಕಳುಹಿಸಿ

ಆದಾಗ್ಯೂ, ಅಂತಹ ಡೇಟಾವನ್ನು ತಡೆಹಿಡಿಯುವುದು ಅಥವಾ ಸಮ್ಮತಿಯನ್ನು ಹಿಂಪಡೆಯುವುದರಿಂದ ನಮಗೆ ಸೇವೆಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಮತ್ತು ಅಂತಹ ವೈಯಕ್ತಿಕ ಡೇಟಾವನ್ನು ಬಯಸಿದ ಯಾವುದೇ ಕರಾರುಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ.

ಸಮಂಜಸವಾಗಿ ಪ್ರಾಯೋಗಿಕವಾದ ತಕ್ಷಣ ನಿಮ್ಮ ಆದ್ಯತೆಗಳನ್ನು ನಾವು ಅಪ್ಡೇಟ್ ಮಾಡುತ್ತೇವೆ. ಆದಾಗ್ಯೂ, ಇಲ್ಲಿ ವಿವರಿಸಿದಂತೆ, ನೀವು ನಮ್ಮ ಇಮೇಲಿಂಗ್ ಪಟ್ಟಿಯಿಂದ ಹೊರಗುಳಿದರೆ, ಸಮ್ಮಾನ್ ಕ್ಯಾಪಿಟಲ್ ಅಥವಾ ಇತರ 3ನೇ ಪಾರ್ಟಿಗಳ ಎಲ್ಲಾ ಡೇಟಾಬೇಸ್‌ಗಳಿಂದ ನಿಮ್ಮ ವೈಯಕ್ತಿಕ ಡೇಟಾವನ್ನು ತೆಗೆದುಹಾಕಲು ನಮಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ, ಮೇಲಿನ ವಿಭಾಗದಲ್ಲಿ ನಮೂದಿಸಿದಂತೆ ನಿಮ್ಮ ಡೇಟಾವನ್ನು ಅಳಿಸಲು ನೀವು ಕೋರಿಕೆಯನ್ನು ಸಲ್ಲಿಸಬೇಕಾಗುತ್ತದೆ (ನಿಮ್ಮ ಡೇಟಾದ ಮೇಲೆ ನಿಯಂತ್ರಣ).

ಹಕ್ಕು ನಿರಾಕರಣೆ

ಕ್ರೆಡಿಟ್ ಕಾರ್ಡ್‌ಗಳು/ ಡೆಬಿಟ್ ಕಾರ್ಡ್‌ಗಳು ಮತ್ತು/ ಅಥವಾ ಅವುಗಳ ಪರಿಶೀಲನಾ ಪ್ರಕ್ರಿಯೆ ಮತ್ತು ವಿವರಗಳಿಗೆ ಸಂಬಂಧಿಸಿದಂತೆ ಅಥವಾ ಆನ್ಲೈನ್ ಟ್ರಾನ್ಸಾಕ್ಷನ್‌ಗಳಿಗೆ ಸಂಬಂಧಿಸಿದ ಯಾವುದೇ ಡೇಟಾ ಮತ್ತು/ ಅಥವಾ ಡೇಟಾಕ್ಕೆ ಸಂಬಂಧಿಸಿದ ಯಾವುದೇ ನಷ್ಟ ಅಥವಾ ಹಾನಿಗೆ ಅಥವಾ ಕಾನೂನು ಪ್ರಕ್ರಿಯೆಯನ್ನು ಅನುಸರಿಸುವಲ್ಲಿ ಅಥವಾ ಬೇರೆ ಯಾವುದೇ ಡೇಟಾಕ್ಕೆ ಸಂಬಂಧಿಸಿದಂತೆ ಯಾವುದೇ ದೋಷ, ಲೋಪ ಅಥವಾ ತಪ್ಪಾಗಿ ಬಹಿರಂಗಪಡಿಸಲಾದರೆ ಮತ್ತು ಬಳಸಲಾಗದಿದ್ದರೆ ಸಮ್ಮಾನ್ ಕ್ಯಾಪಿಟಲ್ ಹೊಣೆಗಾರರಾಗಿರುವುದಿಲ್ಲ. ಸಮ್ಮಾನ್ ಕ್ಯಾಪಿಟಲ್ ಯಾವುದೇ ಕ್ರೆಡಿಟ್ ಡೆಬಿಟ್ ಕಾರ್ಡ್ ವಿವರಗಳನ್ನು ಸಂಗ್ರಹಿಸುವುದಿಲ್ಲ. ನೋಂದಣಿಯ ಸಮಯದಲ್ಲಿ ಸಮ್ಮಾನ್ ಕ್ಯಾಪಿಟಲ್ ಕಡ್ಡಾಯವಾಗಿ ಅಥವಾ ಐಚ್ಛಿಕವಾಗಿ ಕೇಳದ ಯಾವುದೇ ಇತರ ವೈಯಕ್ತಿಕ ಮತ್ತು ಸೂಕ್ಷ್ಮ ವೈಯಕ್ತಿಕ ಡೇಟಾ ; ಇಚ್ಛಾಶಕ್ತಿಯ ಮತ್ತು ಉದ್ದೇಶಪೂರ್ವಕ ಸಜ್ಜುಗೊಳಿಸುವಿಕೆಗೆ ಅಕೌಂಟ್‌ಗಳು ; ಮತ್ತು ಅಂತಹ ಡೇಟಾ ಉಲ್ಲಂಘನೆಗೆ ಸಮ್ಮಾನ್ ಕ್ಯಾಪಿಟಲ್ ಜವಾಬ್ದಾರರಾಗಿರುವುದಿಲ್ಲ.

ಯಾವುದೇ ಒಪ್ಪಂದದ ಹೊಣೆಗಾರಿಕೆ ಇಲ್ಲ

ಈ ಗೌಪ್ಯತಾ ಪಾಲಿಸಿಯು ಯಾವುದೇ ಪಾರ್ಟಿಯಲ್ಲಿ ಅಥವಾ ಪರವಾಗಿ ಯಾವುದೇ ಒಪ್ಪಂದ ಅಥವಾ ಇತರ ಕಾನೂನು ಹಕ್ಕುಗಳನ್ನು ರಚಿಸುವುದಿಲ್ಲ ಹಾಗೂ ಅಂಥ ಉದ್ದೇಶವನ್ನು ಹೊಂದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ಬೌದ್ಧಿಕ ಆಸ್ತಿ ಹಕ್ಕುಗಳು

ಈ ವೆಬ್ಸೈಟ್/ಅಪ್ಲಿಕೇಶನ್‌ಗಳಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಗೆ ಸಂಬಂಧಿಸಿದಂತೆ (ಎಲ್ಲಾ ಟೆಕ್ಸ್ಟ್‌ಗಳು, ಗ್ರಾಫಿಕ್ಸ್ ಮತ್ತು ಲೋಗೋಗಳು ಸೇರಿದಂತೆ) ಸಮ್ಮಾನ್ ಕ್ಯಾಪಿಟಲ್ ಎಲ್ಲಾ ಹಕ್ಕುಗಳನ್ನು (ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು, ಪೇಟೆಂಟ್‌ಗಳು ಮತ್ತು ಯಾವುದೇ ಇತರ ಬೌದ್ಧಿಕ ಆಸ್ತಿ ಹಕ್ಕುಗಳು ಸೇರಿದಂತೆ) ಉಳಿಸಿಕೊಳ್ಳುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

ಈ ಗೌಪ್ಯತಾ ಪಾಲಿಸಿಗೆ ಬದಲಾವಣೆಗಳು

ಯಾವುದೇ ಮುಂಚಿತ ಸೂಚನೆ ನೀಡದೆ ಯಾವುದೇ ಸಮಯದಲ್ಲಿ ಈ ಗೌಪ್ಯತಾ ಪಾಲಿಸಿ ಅಥವಾ ನಮ್ಮ ಯಾವುದೇ ಪಾಲಿಸಿಗಳು/ಅಭ್ಯಾಸಗಳನ್ನು ಬದಲಾಯಿಸುವ ಅಥವಾ ಅಪ್ಡೇಟ್ ಮಾಡುವ ಹಕ್ಕನ್ನು ಸಮ್ಮಾನ್ ಕ್ಯಾಪಿಟಲ್ ಕಾಯ್ದಿರಿಸುತ್ತದೆ; ಆದ್ದರಿಂದ, ಅಂತಹ ಯಾವುದೇ ಬದಲಾವಣೆಗಳ ಬಗ್ಗೆ ನಿಮಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಲು, ಗೌಪ್ಯತಾ ಪಾಲಿಸಿಯನ್ನು ನಿಯತಕಾಲಿಕವಾಗಿ ಪರಿಶೀಲಿಸುವಂತೆ ನಿಮ್ಮನ್ನು ಕೋರಲಾಗಿದೆ. ಈ ಗೌಪ್ಯತಾ ಪಾಲಿಸಿಯು ಸಮ್ಮಾನ್ ಕ್ಯಾಪಿಟಲ್ ವೆಬ್‌ಸೈಟ್ ಮತ್ತು ಸಮ್ಮಾನ್ ಕ್ಯಾಪಿಟಲ್ ಅಪ್ಲಿಕೇಶನ್‌ಗಳಿಗೆ ಅಥವಾ ಸಮ್ಮಾನ್ ಕ್ಯಾಪಿಟಲ್ ಅದರ ಸೇವೆಗಳಿಗಾಗಿ ಬಳಸುವ ಯಾವುದೇ ಇತರ ಮಾಧ್ಯಮಗಳಿಗೆ ಏಕರೂಪದಲ್ಲಿ ಅನ್ವಯವಾಗುತ್ತದೆ. ನಮ್ಮ www.sammaancapital.com ವೆಬ್‌ಸೈಟ್‌‌ನಲ್ಲಿ ಅದನ್ನು ಪೋಸ್ಟ್ ಮಾಡಿದ ನಂತರ ಯಾವುದೇ ಬದಲಾವಣೆಗಳು ಅಥವಾ ಅಪ್ಡೇಟ್‌ಗಳು ತಕ್ಷಣ ಪರಿಣಾಮಕಾರಿಯಾಗುತ್ತವೆ.

ಡೇಟಾ ಗೌಪ್ಯತೆ ಸಮಸ್ಯೆಗಳು ಮತ್ತು ಯಾರನ್ನು ಸಂಪರ್ಕಿಸಬೇಕು

ಈ ಗೌಪ್ಯತಾ ನೀತಿಯ ಬಗ್ಗೆ ಅಥವಾ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಬಗ್ಗೆ ನೀವು ಯಾವುದೇ ಪ್ರಶ್ನೆಗಳು, ಕಾಮೆಂಟ್‌ಗಳು ಅಥವಾ ಕಳಕಳಿಗಳನ್ನು ಹೊಂದಿದ್ದರೆ, ದಯವಿಟ್ಟು privacy@sammaancapital.com ನಲ್ಲಿ ನಮ್ಮನ್ನು ಸಂಪರ್ಕಿಸಿ

logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon
ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ
icon