logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ
ಅಪ್ಲೈ
logo
logo
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್
ಸಂಪರ್ಕಿಸಿ
ಹೂಡಿಕೆದಾರ ಸಂಬಂಧ

ಹಕ್ಕು ನಿರಾಕರಣೆ

ಸಾಮಾನ್ಯ  

ಈ ಒಪ್ಪಂದವು ಈ ಸೈಟ್ (https://www.sammaancapital.com/ ಮತ್ತು www.sammaancapital.com) ಬಳಸಲು ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಮತ್ತು ಸಬ್‌ಸ್ಕ್ರೈಬರ್‌ಗಳು ಸೈಟ್ (ಒಟ್ಟಾರೆಯಾಗಿ "ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳು") ಅಡಿಯಲ್ಲಿ ಲಭ್ಯವಿರುವ ಎಲ್ಲಾ ಉಪ ಸೈಟ್‌ಗಳನ್ನು ಸೆಟ್ ಮಾಡುತ್ತದೆ. ""ಸಬ್‌ಸ್ಕ್ರೈಬರ್" ಅಂದರೆ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳ ಪ್ರವೇಶ ಮತ್ತು ಬಳಕೆಗಾಗಿ ಸಂಪರ್ಕವನ್ನು ("ಅಕೌಂಟ್") ಸ್ಥಾಪಿಸುವ ಅಥವಾ ಅಕ್ಸೆಸ್ ಮಾಡುವ ಪ್ರತಿಯೊಬ್ಬ ವ್ಯಕ್ತಿಯಾಗಿರುತ್ತಾರೆ.

 

ಬಳಕೆಯ ಮೇಲಿನ ನಿರ್ಬಂಧಗಳು

ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳು ಸಮ್ಮಾನ್ ಕ್ಯಾಪಿಟಲ್‌ನ ಗ್ರೂಪ್ ಕಂಪನಿಯಾದ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಮಾಲೀಕತ್ವ ಮತ್ತು ನಿರ್ವಹಣೆಯಲ್ಲಿವೆ ಮತ್ತು ಕಂಪನಿ, ಅದರ ಗ್ರೂಪ್ ಕಂಪನಿಗಳು, ವಿವಿಧ ಸುದ್ದಿ ಸಂಸ್ಥೆಗಳು ಮತ್ತು ಇತರ ಮೂಲಗಳು (ಕಂಟೆಂಟ್ ಪಾಲುದಾರರನ್ನು ಒಳಗೊಂಡಂತೆ) ಒದಗಿಸಿದ ಮಾಹಿತಿಗಳಿಂದ ಸಂಪೂರ್ಣವಾಗಿ ಅಥವಾ ಭಾಗಶಃ ಪಡೆದ ಮಾಹಿತಿಗಳನ್ನು ಒಳಗೊಂಡಿದೆ ಮತ್ತು ಅಂತಾರಾಷ್ಟ್ರೀಯ ಹಕ್ಕುಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ಕಾನೂನುಗಳಿಂದ ರಕ್ಷಿಸಲ್ಪಟ್ಟಿದೆ. ಸಬ್‌ಸ್ಕ್ರೈಬರ್‌ಗಳಿಂದ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳಲ್ಲಿನ ಮಾಹಿತಿ ಮತ್ತು ವಿಷಯಗಳನ್ನು ಬಳಸುವ ನಿರ್ಬಂಧಗಳನ್ನು ಕೆಳಗೆ ನಮೂದಿಸಲಾಗಿದೆ. ನಿರ್ದಿಷ್ಟವಾಗಿ ಅಧಿಕೃತ ಒಪ್ಪಿಗೆ ನೀಡದ ಹೊರತು, ಸಬ್‌ಸ್ಕ್ರೈಬರ್‌ಗಳು ಕೋಡ್ ಮತ್ತು ಸಾಫ್ಟ್‌ವೇರ್ ಸೇರಿದಂತೆ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳಿಂದ ಯಾವುದೇ ಮಾಹಿತಿಯನ್ನು ಯಾವುದೇ ರೀತಿಯಲ್ಲಿ ಮಾರ್ಪಾಡು ಮಾಡಲು, ನಕಲು ಮಾಡಲು, ಪುನರುತ್ಪಾದಿಸಲು, ಪುನಃ ಪ್ರಕಟಿಸಲು, ಅಪ್ಲೋಡ್ ಮಾಡಲು, ಪೋಸ್ಟ್ ಮಾಡಲು, ರವಾನಿಸಲು ಅಥವಾ ವಿತರಿಸಲು ಸಾಧ್ಯವಿಲ್ಲ. ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳನ್ನು (ಮೊದಲ ಬಾರಿಗೆ ಈ ಒಪ್ಪಂದವನ್ನು ಓದುವುದನ್ನು ಹೊರತುಪಡಿಸಿ) ಬಳಸುವ ಮೂಲಕ, ಸಬ್‌ಸ್ಕ್ರೈಬರ್ ಇಲ್ಲಿನ ಎಲ್ಲಾ ನಿಯಮ ಮತ್ತು ಷರತ್ತುಗಳನ್ನು ಅನುಸರಿಸಲು ಒಪ್ಪುತ್ತಾರೆ. ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳನ್ನು ಬಳಸುವ ಹಕ್ಕು ಸಬ್‌ಸ್ಕ್ರೈಬರ್‌ಗೆ ವೈಯಕ್ತಿಕವಾಗಿದೆ ಮತ್ತು ಇದನ್ನು ಯಾವುದೇ ವ್ಯಕ್ತಿ ಅಥವಾ ಘಟಕಕ್ಕೆ ವರ್ಗಾಯಿಸಲಾಗುವುದಿಲ್ಲ. ಸಬ್‌ಸ್ಕ್ರೈಬರ್ ತಮ್ಮ ಅಕೌಂಟ್‌ನ (ಯಾವುದೇ ಸ್ಕ್ರೀನ್ ಹೆಸರು ಅಥವಾ ಪಾಸ್ವರ್ಡ್ ಅಡಿಯಲ್ಲಿ) ಎಲ್ಲಾ ಬಳಕೆಗೆ ಜವಾಬ್ದಾರರಾಗಿರುತ್ತಾರೆ ಮತ್ತು ತಮ್ಮ ಅಕೌಂಟ್‌ನ ಎಲ್ಲಾ ಬಳಕೆಯು ಈ ಒಪ್ಪಂದದ ನಿಬಂಧನೆಗಳನ್ನು ಸಂಪೂರ್ಣವಾಗಿ ಪಾಲಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸಬ್‌ಸ್ಕ್ರೈಬರ್ ಜವಾಬ್ದಾರರಾಗಿರುತ್ತಾರೆ. ಸಬ್‌ಸ್ಕ್ರೈಬರ್‌ಗಳ ಪಾಸ್ವರ್ಡ್ (ಗಳು) ಯಾವುದಾದರೂ ಇದ್ದರೆ, ಅದರ ಗೌಪ್ಯತೆಯನ್ನು ರಕ್ಷಿಸಲು ಸಬ್‌ಸ್ಕ್ರೈಬರ್‌ ಜವಾಬ್ದಾರರಾಗಿರುತ್ತಾರೆ. ವಿಷಯ, ಲಭ್ಯತೆಯ ಗಂಟೆಗಳು ಮತ್ತು ಅಕ್ಸೆಸ್ ಅಥವಾ ಬಳಕೆಗೆ ಅಗತ್ಯವಿರುವ ಸಲಕರಣೆಗಳನ್ನು ಒಳಗೊಂಡು, ಆದರೆ ಅವುಗಳಿಗೆ ಸೀಮಿತವಾಗಿರದೆ ಸಮ್ಮಾನ್ ಕ್ಯಾಪಿಟಲ್ ವೆಬ್‍ಸೈಟ್‌ಗಳ ಯಾವುದೇ ಅಂಶಗಳು ಅಥವಾ ಫೀಚರ್‌ಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಅಥವಾ ನಿಲ್ಲಿಸುವ ಹಕ್ಕನ್ನು ಕಂಪನಿಯು ಹೊಂದಿರುತ್ತದೆ. ಬದಲಾಯಿಸಲಾದ ನಿಯಮಗಳು ಯಾವುದೇ ಸಮಯದಲ್ಲಿ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳ ಅಥವಾ ಅದರ ಯಾವುದೇ ಭಾಗದ ಬಳಕೆಗೆ ಸಬ್‌ಸ್ಕ್ರೈಬರ್‌ಗಳಿಗೆ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಬದಲಾಯಿಸುವ ಅಥವಾ ಮಾರ್ಪಾಡು ಮಾಡುವ ಅಥವಾ ಬಳಕೆಗೆ ಫೀಸ್ ಮತ್ತು ಶುಲ್ಕಗಳನ್ನು ಸೇರಿಸುವುದನ್ನು ಒಳಗೊಂಡಂತೆ ಆದರೆ ಅದಕ್ಕೆ ಸೀಮಿತವಾಗಿಲ್ಲದೆ ಹೊಸ ಷರತ್ತುಗಳನ್ನು ವಿಧಿಸುವ ಹಕ್ಕನ್ನು ಕಂಪನಿಯು ಹೊಂದಿರುತ್ತದೆ. ಅಂತಹ ಬದಲಾವಣೆಗಳು, ಮಾರ್ಪಾಡುಗಳು, ಸೇರ್ಪಡೆಗಳು ಅಥವಾ ಅಳಿಸುವಿಕೆಗಳು ತಕ್ಷಣವೇ ಅದರ ನೋಟಿಸ್ ಮೇಲೆ ಪರಿಣಾಮಕಾರಿಯಾಗುತ್ತವೆ. ನೋಟಿಸ್ ಅನ್ನು ಸಮ್ಮಾನ್ ಕ್ಯಾಪಿಟಲ್ ಸೈಟ್‌ನಲ್ಲಿ ಪೋಸ್ಟ್ ಮಾಡುವುದು, ಅಥವಾ ಎಲೆಕ್ಟ್ರಾನಿಕ್ ಅಥವಾ ಸಾಂಪ್ರದಾಯಿಕ ಮೇಲ್ ಒಳಗೊಂಡಂತೆ ಆದರೆ ಅದಕ್ಕೆ ಸೀಮಿತವಾಗಿಲ್ಲದೆ ಸಬ್‌ಸ್ಕ್ರೈಬರ್ ಅದರ ನೋಟಿಸ್ ಪಡೆಯುವ ಯಾವುದೇ ಇತರ ವಿಧಾನಗಳ ಮೂಲಕ ನೀಡಬಹುದು. ಅಂತಹ ನೋಟಿಸ್ ನಂತರ ಸಬ್‌ಸ್ಕ್ರೈಬರ್‌ ಸಮ್ಮಾನ್ ಕ್ಯಾಪಿಟಲ್ ಸೈಟ್‌ ಅನ್ನು ಯಾವುದೇ ರೀತಿಯಲ್ಲಿ ಬಳಸಿದರೂ ಅವರು ಅಂತಹ ಬದಲಾವಣೆಗಳು, ಮಾರ್ಪಾಡುಗಳು ಅಥವಾ ಸೇರ್ಪಡೆಗಳನ್ನು ಅಂಗೀಕರಿಸಿದ್ದಾರೆ ಎಂದು ಪರಿಗಣಿಸಲ್ಪಡುತ್ತದೆ.

 

ಉಪಕರಣ

ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳಿಗೆ ಅಕ್ಸೆಸ್ ಮತ್ತು ಬಳಕೆಗೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಹಕ್ಕುಗಳಿಗೆ ಅಗತ್ಯವಿರುವ ಎಲ್ಲಾ ದೂರವಾಣಿ, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಇತರ ಉಪಕರಣಗಳನ್ನು ಪಡೆಯಲು ಮತ್ತು ನಿರ್ವಹಿಸಲು ಸಬ್‌ಸ್ಕ್ರೈಬರ್ ಜವಾಬ್ದಾರರಾಗಿರುತ್ತಾರೆ.

 

ವೆಬ್‌ಸೈಟ್ ಬಳಕೆಯ ಪಾಲಿಸಿ

ಇದು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ ಆಗಿದೆ ಮತ್ತು ಇದು ಕೇವಲ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ನ ಒಡೆತನದಲ್ಲಿದೆ.  

ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್‌ಗೆ ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯನ್ನು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ದೃಢೀಕರಿಸುತ್ತದೆ. ಮುಂದುವರಿದು, ಈ ಸಂಸ್ಥೆ ಅಥವಾ ಅದರ ಪ್ರಾಡಕ್ಟ್‌ಗಳ ಕುರಿತು ಇಂಟರ್ನೆಟ್‌ನಲ್ಲಿ ಯಾವುದೇ ಇತರ ವೆಬ್‌ಸೈಟ್‌ ನೀಡಿರುವ ಯಾವುದೇ ಮಾಹಿತಿಗೆ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಜವಾಬ್ದಾರರಾಗಿರುವುದಿಲ್ಲ ಎಂದು ಸೂಚಿಸಲಾಗಿದೆ.  

ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಯಾವುದೇ ಡೇಟಾ ಅಥವಾ ಮಾಹಿತಿಯ ಗುಣಮಟ್ಟ, ನಿಖರತೆ ಅಥವಾ ಸಂಪೂರ್ಣತೆಗೆ ಸಂಬಂಧಿಸಿದಂತೆ ಯಾವುದೇ ಪ್ರಾತಿನಿಧ್ಯಗಳನ್ನು ಖಾತರಿಪಡಿಸುವುದಿಲ್ಲ ಅಥವಾ ಮಾಡುವುದಿಲ್ಲ ಮತ್ತು ಯಾವುದಾದರೂ ತಪ್ಪು/ದೋಷ ಇದ್ದಲ್ಲಿ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಅದಕ್ಕೆ ಯಾವುದೇ ರೀತಿಯಲ್ಲಿ ಹೊಣೆಗಾರರಾಗಿರುವುದಿಲ್ಲ.  

ಸೈಟ್ ಅನ್ನು ನಿಯತಕಾಲಿಕವಾಗಿ ಬದಲಾವಣೆಗಳೊಂದಿಗೆ ಅಪ್ಡೇಟ್ ಮಾಡಬಹುದಾದರೂ, ಈ ಸೈಟ್ ಎಲ್ಲಾ ಸಮಯದಲ್ಲೂ ಅಥವಾ ಯಾವುದೇ ಸಮಯದಲ್ಲಿ ಇತ್ತೀಚಿನ ತಿದ್ದುಪಡಿಗಳು/ಮಾಹಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಖಾತರಿಪಡಿಸುವುದಿಲ್ಲ.

 

ವಾರಂಟಿ ಹಕ್ಕು ನಿರಾಕರಣೆ: ಹೊಣೆಗಾರಿಕೆಯ ಮಿತಿ  

ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳನ್ನು ಬಳಸುವುದು ಸಬ್‌ಸ್ಕ್ರೈಬರ್‌ಗಳ ಏಕೈಕ ಅಪಾಯದಲ್ಲಿದೆ ಎಂದು ಸಬ್‌ಸ್ಕ್ರೈಬರ್ ಸ್ಪಷ್ಟವಾಗಿ ಒಪ್ಪುತ್ತಾರೆ. ಕಂಪನಿ, ಅದರ ಅಂಗಸಂಸ್ಥೆಗಳು ಅಥವಾ ಅವುಗಳ ಯಾವುದೇ ಉದ್ಯೋಗಿಗಳು, ಏಜೆಂಟ್‌ಗಳು, ಥರ್ಡ್ ಪಾರ್ಟಿ ಕಂಟೆಂಟ್ ಪೂರೈಕೆದಾರರು ಅಥವಾ ಪರವಾನಗಿದಾರರು ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳು ತಡೆರಹಿತ ಅಥವಾ ದೋಷ ರಹಿತವಾಗಿವೆ ಎಂದು ಖಾತರಿಪಡಿಸುವುದಿಲ್ಲ ; ಅಥವಾ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳ ಬಳಕೆಯಿಂದ ಪಡೆಯಬಹುದಾದ ಫಲಿತಾಂಶಗಳು ಅಥವಾ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳ ಮೂಲಕ ಒದಗಿಸಲಾದ ಯಾವುದೇ ಮಾಹಿತಿ, ಸೇವೆ ಅಥವಾ ಮರ್ಚಂಡೈಸ್‌ನ ನಿಖರತೆ, ವಿಶ್ವಾಸಾರ್ಹತೆ ಅಥವಾ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಾರಂಟಿಯನ್ನು ನೀಡುವುದಿಲ್ಲ. ಈ ಒಪ್ಪಂದಕ್ಕೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಸೂಚಿತವಾಗಿರುವ ಮತ್ತು ಹೊರಗಿಡುವಿಕೆ, ನಿರ್ಬಂಧ ಅಥವಾ ಮಾರ್ಪಾಡು ಮಾಡಲು ಅಸಮರ್ಥವಾಗಿರುವ ವಾರಂಟಿಗಳನ್ನು ಹೊರತುಪಡಿಸಿ, ಟೈಟಲ್‌‌ನ ವಾರಂಟಿಗಳು ಅಥವಾ ನಿರ್ದಿಷ್ಟ ಉದ್ದೇಶಕ್ಕಾಗಿ ಮರ್ಚೆಂಟಬಿಲಿಟಿ ಅಥವಾ ಫಿಟ್ನೆಸ್‌ನ ಸೂಚಿತ ವಾರಂಟಿಗಳನ್ನು ಒಳಗೊಂಡಂತೆ, ಆದರೆ ಅದಕ್ಕೆ ಸೀಮಿತವಾಗಿರದೆ, ಯಾವುದೇ ರೀತಿಯ, ಅಂದರೆ ಸ್ಪಷ್ಟ ಅಥವಾ ಸೂಚ್ಯ ವಾರಂಟಿಗಳಿಲ್ಲದೆ "ಹೇಗಿದೆಯೋ ಹಾಗೆ" ಆಧಾರದ ಮೇಲೆ ಸಮ್ಮಾನ್ ಕ್ಯಾಪಿಟಲ್ ವೆಬ್‌ಸೈಟ್‌ ಅನ್ನು ಒದಗಿಸಲಾಗುತ್ತದೆ. ಯಾವುದೇ ಕಾರ್ಯಕ್ಷಮತೆಯ ವಿಫಲತೆ, ದೋಷ, ಲೋಪ, ಅಡಚಣೆ, ಅಳಿಸುವಿಕೆ, ನ್ಯೂನತೆ, ಕಾರ್ಯಾಚರಣೆ ಅಥವಾ ಪ್ರಸರಣದಲ್ಲಿ ವಿಳಂಬ, ಕಂಪ್ಯೂಟರ್ ವೈರಸ್, ಸಂವಹನ ಲೈನ್ ವೈಫಲ್ಯ, ಕಳ್ಳತನ ಅಥವಾ ನಾಶಪಡಿಸುವಿಕೆ ಅಥವಾ ದಾಖಲೆಯ ಬಳಕೆಗೆ ಅನಧಿಕೃತ ಅಕ್ಸೆಸ್, ತಿದ್ದುಪಡಿ, ಒಪ್ಪಂದದ ಉಲ್ಲಂಘನೆ, ಹಿಂಸಾತ್ಮಕ ನಡವಳಿಕೆ, ನಿರ್ಲಕ್ಷ್ಯ ಅಥವಾ ಇತರ ಯಾವುದೇ ಕಾರಣದ ಅಡಿಯಲ್ಲಿ ಉಂಟಾದ ಯಾವುದೇ ಹಾನಿಗಳು ಅಥವಾ ಗಾಯಗಳಿಗೆ ಈ ಹೊಣೆಗಾರಿಕೆಯ ಹಕ್ಕು ನಿರಾಕರಣೆ ಅನ್ವಯವಾಗುತ್ತದೆ. ಯಾವುದೇ ಸಂದರ್ಭದಲ್ಲಿ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳು ಅಥವಾ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳ ಸಾಫ್ಟ್‌ವೇರ್ ರಚನೆ, ಉತ್ಪಾದನೆ ಅಥವಾ ವಿತರಣೆಯಲ್ಲಿ ಒಳಗೊಂಡಿರುವ ಕಂಪನಿ, ಅಥವಾ ಯಾವುದೇ ವ್ಯಕ್ತಿ ಅಥವಾ ಘಟಕವು ಯಾವುದೇ ಮಿತಿಯಿಲ್ಲದೆ, ನೇರ, ಪರೋಕ್ಷ, ಪ್ರಾಸಂಗಿಕ, ವಿಶೇಷ, ಪರಿಣಾಮಕಾರಿ ಅಥವಾ ಶಿಕ್ಷಾತ್ಮಕ ಹಾನಿಗಳನ್ನು ಒಳಗೊಂಡು ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳ ಬಳಕೆಯಿಂದ ಅಥವಾ ಬಳಕೆಯ ಅಸಮರ್ಥತೆಯಿಂದ ಉಂಟಾಗುವ ಯಾವುದೇ ಹಾನಿಗಳಿಗೆ ಹೊಣೆಗಾರರಾಗಿರುವುದಿಲ್ಲ. ಈ ವಿಭಾಗದ ನಿಬಂಧನೆಗಳು ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳಲ್ಲಿನ ಎಲ್ಲಾ ವಿಷಯಗಳಿಗೆ ಅನ್ವಯವಾಗುತ್ತವೆ ಎಂದು ಸಬ್‌ಸ್ಕ್ರೈಬರ್ ಈ ಮೂಲಕ ಒಪ್ಪಿಕೊಳ್ಳುತ್ತಾರೆ. ಇಲ್ಲಿ ತಿಳಿಸಿರುವ ನಿಯಮಗಳ ಜೊತೆಗೆ, ಕಂಪನಿ ಅಥವಾ ಅದರ ಅಂಗಸಂಸ್ಥೆಗಳು, ಮಾಹಿತಿ ಪೂರೈಕೆದಾರರು ಅಥವಾ ಕಂಟೆಂಟ್ ಪಾಲುದಾರರು ಕಾರಣ ಅಥವಾ ಅವಧಿಯನ್ನು ಲೆಕ್ಕಿಸದೆ, ಯಾವುದೇ ದೋಷಗಳು, ತಪ್ಪುಗಳು, ಲೋಪಗಳು, ಅಥವಾ ಸಮ್ಮಾನ್ ಕ್ಯಾಪಿಟಲ್ ಸೈಟ್‌ಗಳಲ್ಲಿ ಒಳಗೊಂಡಿರುವ ಮಾಹಿತಿಯಲ್ಲಿನ ಇತರ ದೋಷಗಳು ಅಥವಾ ಅನಧಿಕೃತತೆ, ಅಥವಾ ಬಳಕೆದಾರರಿಗೆ ಪ್ರಸರಣದಲ್ಲಿ ಯಾವುದೇ ವಿಳಂಬ ಅಥವಾ ಅಡಚಣೆ, ಅಥವಾ ಅದರಿಂದ ಉಂಟಾಗುವ ಯಾವುದೇ ಕ್ಲೈಮ್‌ಗಳು ಅಥವಾ ನಷ್ಟಗಳಿಗೆ ಜವಾಬ್ದಾರರಾಗಿರುವುದಿಲ್ಲ. ಈ ಮುಂದಿನ ಯಾವುದೇ ಪಾರ್ಟಿಗಳು ಲಾಭಗಳನ್ನು ಕಳೆದುಕೊಳ್ಳುವುದು, ಶಿಕ್ಷಾತ್ಮಕ ಅಥವಾ ಪರಿಣಾಮಕಾರಿ ಹಾನಿಗಳನ್ನು ಒಳಗೊಂಡಂತೆ ಆದರೆ ಅವುಗಳಿಗೆ ಸೀಮಿತವಾಗದೆ ಯಾವುದೇ ಥರ್ಡ್ ಪಾರ್ಟಿ ಕ್ಲೈಮ್‌ಗಳು ಅಥವಾ ನಷ್ಟಗಳಿಗೆ ಹೊಣೆಗಾರರಾಗಿರುವುದಿಲ್ಲ. ಒದಗಿಸಲಾದ ಮಾಹಿತಿಯ ಆಧಾರದ ಮೇಲಿನ ಹೂಡಿಕೆ ನಿರ್ಧಾರಗಳಿಗೆ ಕಂಪನಿ, ಅದರ ಅಂಗಸಂಸ್ಥೆಗಳು, ಮಾಹಿತಿ ಪೂರೈಕೆದಾರರು ಅಥವಾ ಕಂಟೆಂಟ್ ಪಾಲುದಾರರು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ. ಕಂಪನಿ, ಅಥವಾ ಅದರ ಅಂಗಸಂಸ್ಥೆಗಳು, ಮಾಹಿತಿ ಪೂರೈಕೆದಾರರು ಅಥವಾ ಕಂಟೆಂಟ್ ಪಾಲುದಾರರು ಯಾವುದೇ ಮಾಹಿತಿಯ ಸಮಯೋಚಿತತೆ, ಕ್ರಮ, ನಿಖರತೆ ಅಥವಾ ಸಂಪೂರ್ಣತೆಯನ್ನು ಖಾತರಿ ಅಥವಾ ಖಚಿತಪಡಿಸುವುದಿಲ್ಲ.

logo
facebook icontwitter iconinstagram iconlinkedin iconyoutube icon
ನಮ್ಮ ಬಗ್ಗೆ
ಪ್ರಾಡಕ್ಟ್
ಕ್ಯಾಲ್ಕುಲೇಟರ್‌ಗಳು
ಸಂಪನ್ಮೂಲ ಕೇಂದ್ರ
logo
facebook icontwitter iconinstagram iconlinkedin iconyoutube icon
icon
ನಿಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ವೈಯಕ್ತಿಕಗೊಳಿಸಿದ ಶಿಫಾರಸುಗಳನ್ನು ಒದಗಿಸಲು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಕುಕೀಗಳು ಮತ್ತು ಅಂತಹ ಇತರೆ ತಂತ್ರಜ್ಞಾನಗಳನ್ನು ಬಳಸುತ್ತದೆ. ನಮ್ಮ ಆನ್ಲೈನ್ ಸೇವೆಗಳನ್ನು ಬಳಸುವ ಮೂಲಕ, ನೀವು ಇವುಗಳಿಗೆ ಅನುಗುಣವಾಗಿ ನಮ್ಮ ಕುಕೀಗಳ ಬಳಕೆಯನ್ನು ಸಮ್ಮತಿಸುತ್ತೀರಿ ಕುಕೀ ಪಾಲಿಸಿ