ಫ್ಲೋಟಿಂಗ್ ದರದ ಲೋನ್‌ಗಳು
ಬಿಸಿನೆಸ್ ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಪಡೆದ ಲೋನ್ ಮೇಲೆ ಯಾವುದೇ ಮುಂಗಡ ಪಾವತಿ / ಫೋರ್‌ಕ್ಲೋಸರ್ ಶುಲ್ಕಗಳು ಅನ್ವಯವಾಗುವುದಿಲ್ಲ.
ಬಿಸಿನೆಸ್ ಉದ್ದೇಶಕ್ಕಾಗಿ ಲೋನನ್ನು ಪಡೆದುಕೊಳ್ಳುವಲ್ಲಿ, ಮುಂಗಡ ಪಾವತಿಯು ಈ ಕೆಳಗೆ ನಮೂದಿಸಿದಂತೆ ಶುಲ್ಕಗಳನ್ನು ವಿಧಿಸುತ್ತದೆ:
ಫಿಕ್ಸೆಡ್ ಮತ್ತು ಫ್ಲೋಟಿಂಗ್ (ಡ್ಯುಯಲ್ ರೇಟ್) ಲೋನ್‌ಗಳು
ಬಿಸಿನೆಸ್ ಹೊರತುಪಡಿಸಿ ಇತರ ಉದ್ದೇಶಕ್ಕಾಗಿ ಲೋನ್ ಪಡೆದುಕೊಳ್ಳಲಾಗಿದೆ ಎಂಬ ಷರತ್ತಿಗೆ ಒಳಪಟ್ಟು, ಲೋನ್‌ನ ಫಿಕ್ಸೆಡ್ ಬಡ್ಡಿ ದರದ ಅವಧಿಯ ಮುಕ್ತಾಯದ ನಂತರ ಅದನ್ನು ಫ್ಲೋಟಿಂಗ್ ಬಡ್ಡಿ ಲೋನ್ ಆಗಿ ಪರಿವರ್ತಿಸಿದ ಮೇಲೆ, ಮುಂಗಡ ಪಾವತಿಗಳಿಗೆ ಯಾವುದೇ ಮುಂಗಡ ಪಾವತಿ ಶುಲ್ಕಗಳನ್ನು ಪಾವತಿಸಲಾಗುವುದಿಲ್ಲ.
ಲೋನ್‌ನ ಫಿಕ್ಸೆಡ್ ಬಡ್ಡಿ ದರದ ಅವಧಿಯಲ್ಲಿ ಯಾವುದೇ ಮುಂಗಡ ಪಾವತಿ ಮಾಡಿದ್ದರೆ ಮತ್ತು/ಅಥವಾ ಲೋನ್ ಅನ್ನು ಬಿಸಿನೆಸ್ ಉದ್ದೇಶಕ್ಕಾಗಿ ಪಡೆದಿದ್ದರೆ, ಈ ಕೆಳಗೆ ನಮೂದಿಸಿದಂತೆ ಶುಲ್ಕಗಳನ್ನು ವಿಧಿಸಲಾಗುತ್ತದೆ:
ಫ್ಲೋಟಿಂಗ್ ದರದ ಲೋನ್‌ಗಳು ಮತ್ತು ಫಿಕ್ಸೆಡ್ ಮತ್ತು ಫ್ಲೋಟಿಂಗ್ (ಡ್ಯುಯಲ್ ರೇಟ್) ಲೋನ್‌ಗಳು
ಹಿಂದಿನ 12 ತಿಂಗಳಲ್ಲಿ ಮಾಡಿದ ಎಲ್ಲಾ ಮುಂಗಡ ಪಾವತಿಗಳನ್ನು ಒಳಗೊಂಡಂತೆ ಬಾಕಿ ಅಸಲಿನ (POS) 25% ವರೆಗಿನ ಎಲ್ಲಾ ಮುಂಗಡ ಪಾವತಿಗಳಿಗೆ ಯಾವುದೇ ಮುಂಗಡ ಪಾವತಿ ಶುಲ್ಕಗಳು ಅನ್ವಯವಾಗುವುದಿಲ್ಲ.
12 ತಿಂಗಳ ಒಳಗೆ ಮಾಡಿದ ಎಲ್ಲಾ ಮುಂಗಡ ಪಾವತಿಗಳನ್ನು ಒಳಗೊಂಡಂತೆ ಮುಂಗಡ ಪಾವತಿ ಮೊತ್ತವು ಅಸಲು ಬಾಕಿ (POS) ಮೊತ್ತದ 25% ಮೀರಿದಾಗ, ನಂತರ POS ನ 25% ಮೀರಿದ ಮೊತ್ತದ ಮೇಲೆ ಅನ್ವಯವಾಗುವ ಮುಂಗಡ ಪಾವತಿ ಶುಲ್ಕವನ್ನು ವಿಧಿಸಲಾಗುತ್ತದೆ.
ಫೋರ್‌ಕ್ಲೋಸರ್ ಪಾವತಿಗಳ ಮೇಲೆ ಅನ್ವಯವಾಗುವ ಮುಂಗಡ ಪಾವತಿ / ಫೋರ್‌ಕ್ಲೋಸರ್ ಶುಲ್ಕಗಳು ಹಿಂದಿನ 12 ತಿಂಗಳ ಒಳಗೆ ಮಾಡಲಾದ ಎಲ್ಲಾ ಮುಂಗಡ ಪಾವತಿಗಳನ್ನು ಒಳಗೊಂಡಿರುತ್ತವೆ.
ಸಾಲಗಾರರ ಲೋನ್ ಒಪ್ಪಂದದಲ್ಲಿ ನಿರ್ದಿಷ್ಟವಾಗಿ ನಮೂದಿಸದ ಹೊರತು, ಮೊದಲ ವಿತರಣೆಯ ದಿನಾಂಕದಿಂದ ಆರಂಭಿಕ 2 ವರ್ಷಗಳಿಗೆ 5% ಮತ್ತು ನಂತರದ ಅವಧಿಗೆ 3% ಮುಂಗಡ ಪಾವತಿ / ಫೋರ್‌ಕ್ಲೋಸರ್ ಶುಲ್ಕ ಅನ್ವಯವಾಗುತ್ತದೆ..
ಮುಂಗಡ ಪಾವತಿಗೆ ಯಾವುದೇ ಲಾಕ್-ಇನ್ ಅವಧಿಯಿಲ್ಲ, ಕಾಲಕಾಲಕ್ಕೆ ಪ್ರಾಧಿಕಾರಗಳು ನಿಗದಿಪಡಿಸಿದಂತೆ ಮುಂಗಡ-ಪಾವತಿ/ ಸ್ವತ್ತು ಮರುಸ್ವಾಧೀನ ಶುಲ್ಕಗಳ ಮೇಲೆ ಅನ್ವಯವಾಗುವ ತೆರಿಗೆಗಳನ್ನು ವಿಧಿಸಲಾಗುತ್ತದೆ.
ಮುಂಗಡ ಪಾವತಿ / ಫೋರ್‌ಕ್ಲೋಸರ್ ಶುಲ್ಕಗಳು ಮತ್ತು ವಿವರಗಳು
ಸಾಲಗಾರರ ಪ್ರಕಾರವನ್ನು ಪರಿಗಣಿಸದೆ ಸಾಲಗಾರರ ಲೋನ್ ಒಪ್ಪಂದದಲ್ಲಿ ನಿರ್ದಿಷ್ಟವಾಗಿ ನಮೂದಿಸದ ಹೊರತು, ಮೊದಲ ವಿತರಣೆಯ ದಿನಾಂಕದಿಂದ ಆರಂಭಿಕ 2 ವರ್ಷಗಳ ಕಾಲ 5% ಮತ್ತು ನಂತರ ಸಂಪೂರ್ಣ ಮುಂಗಡ - ಮುಚ್ಚುವಿಕೆಯ ಮೇಲೆ 3% ಮುಂಗಡ ಪಾವತಿ / ಫೋರ್‌ಕ್ಲೋಸರ್ ಶುಲ್ಕ ಅನ್ವಯವಾಗುತ್ತದೆ