ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ECLGS)
ಬಿಸಿನೆಸ್ ಉದ್ಯಮಗಳು ಮತ್ತು MSME ಗಳಿಗೆ ಮುಂಚಿತ-ಅನುಮೋದಿತ ಟಾಪ್-ಅಪ್ ಲೋನ್
ಹಿನ್ನೆಲೆ ಮತ್ತು ಉದ್ದೇಶ
ಕೋವಿಡ್-19 ಸಾಂಕ್ರಾಮಿಕ ಮತ್ತು ಆ ನಂತರದ ಸಾಮಾಜಿಕ ಮತ್ತು ಆರ್ಥಿಕ ಲಾಕ್‌ಡೌನ್‌ಗಳು ಎಲ್ಲಾ ಬಿಸಿನೆಸ್ ಚಟುವಟಿಕೆಗಳನ್ನು ಬಹುತೇಕ ಸಂಪೂರ್ಣವಾಗಿ ಸ್ಥಗಿತಗೊಳಿಸಿದವು. ಸ್ಟಾಕ್‌ಗಳು ಮತ್ತು ಪಾವತಿ ಸೈಕಲ್‌ಗಳು ತಡೆ ಹಿಡಿಯಲ್ಪಟ್ಟ ಕಾರಣದಿಂದ ಹಲವಾರು ಬಿಸಿನೆಸ್‌ಗಳಲ್ಲಿ ಕಾರ್ಯಾಚರಣೆ ಚಕ್ರವು ಹಠಾತ್ ನಿಲುಗಡೆಯಾಗಿ ಬಿಸಿನೆಸ್‌ನಲ್ಲಿ ಉಂಟಾದ ಲಿಕ್ವಿಡಿಟಿ ಸಮಸ್ಯೆಯು ಬಿಸಿನೆಸ್‌ನ ಉಳಿವಿಗೆ ಗಂಭೀರ ಅಪಾಯ ಉಂಟು ಮಾಡಿದವು.
ಮತ್ತಷ್ಟು ಹಾನಿಯನ್ನು ತಡೆಯುವ ಮತ್ತು ಬಿಸಿನೆಸ್ ಮತ್ತು ಆರ್ಥಿಕತೆಗೆ ಜೀವ ನೀಡುವ ಬೆಂಬಲದ ಹೋರಾಟದಲ್ಲಿ, ಭಾರತ ಸರ್ಕಾರವು ಹಣಕಾಸು ಸಚಿವಾಲಯದ ಮೂಲಕ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು (ECLGS) ಪರಿಚಯಿಸಿದೆ. ಇದರ ಮೂಲಕ ಬಿಸಿನೆಸ್ ಉದ್ದೇಶಗಳಿಗಾಗಿ ಬ್ಯಾಂಕ್‌ಗಳು ಮತ್ತು NBFC ಗಳು/HFC ಗಳಿಂದ ಲೋನ್ ಪಡೆದಿರುವ ಬಿಸಿನೆಸ್ ಉದ್ಯಮಗಳು/MSME ಗಳು/ವ್ಯಕ್ತಿಗಳಿಗೆ ಹೆಚ್ಚುವರಿ ಲೋನ್ ಸೌಲಭ್ಯ ಒದಗಿಸಲು ಸರ್ಕಾರವು ಗುರಿ ಹೊಂದಿದೆ. ಇದರಿಂದಾಗಿ ಈ ಉದ್ಯಮಗಳು ಮತ್ತು MSME ಗಳಿಗೆ ತಮ್ಮ ಕಾರ್ಯಾಚರಣೆಯ ಹೊಣೆಗಾರಿಕೆಗಳನ್ನು ಪೂರೈಸಲು ಮತ್ತು ತಮ್ಮ ವ್ಯವಹಾರಗಳನ್ನು ಮರುಪ್ರಾರಂಭಿಸಲು ಅನುವು ಮಾಡಿಕೊಟ್ಟಂತಾಗುತ್ತದೆ.
ಅರ್ಹ ಸಾಲಗಾರರು
ಈ ಪಾಲಿಸಿಯು ಇಲ್ಲಿ ವಿವರಿಸಿದಂತೆ ಪಾಲಿಸಿ ರೈಡರ್‌ಗಳನ್ನು ಪೂರೈಸುವ ಎಲ್ಲಾ ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಅನ್ವಯವಾಗುತ್ತದೆ ಮತ್ತು ECLGS 1.0, ECLGS 1.0 (ವಿಸ್ತರಣೆ), ECLGS 2.0, ECLGS 2.0 (ವಿಸ್ತರಣೆ), ECLGS 3.0, ECLGS 3.0 (ವಿಸ್ತರಣೆ) ಮತ್ತು ECLGS 4.0 ನಂತೆ ಘಟಕಗಳನ್ನು ಹೊಂದಿರುತ್ತದೆ
ಬಿಸಿನೆಸ್ ಉದ್ದೇಶಗಳಿಗಾಗಿ ಲೋನ್ ಪಡೆದಿರುವ, ಎಲ್ಲಾ ಸಾಲದಾತ ಸಂಸ್ಥೆಗಳಲ್ಲಿ 29.2.2020 ರ ಪ್ರಕಾರ ₹ 50 ಕೋಟಿಯವರೆಗಿನ ಒಟ್ಟು ಕ್ರೆಡಿಟ್ ಬಾಕಿ (ಫಂಡ್ ಆಧಾರಿತ ಮಾತ್ರ) ಇರುವ ಬಿಸಿನೆಸ್ ಉದ್ಯಮಗಳು / MSMEಗಳು / ವ್ಯಕ್ತಿಗಳಿಗೆ ಸಂಬಂಧಿಸಿದ ಸಾಲಗಾರರ ಅಕೌಂಟ್‌ಗಳಿಗೆ ECLGS 1.0 ಅನ್ವಯವಾಗುತ್ತದೆ
ECLGS 1.0 (ವಿಸ್ತರಣೆ) ಎಂದರೆ ECLGS 1.0 ರ ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಅಥವಾ ಮಾರ್ಚ್ 31, 2021 ರ ಪರಿಷ್ಕೃತ ಉಲ್ಲೇಖ ದಿನಾಂಕದ ಆಧಾರದ ಮೇಲೆ ECLGS 1.0 ಅಡಿಯಲ್ಲಿ ಅರ್ಹರಾಗುವ ಹೊಸ ಸಾಲಗಾರರಿಗೆ ಹೆಚ್ಚುವರಿ ಬೆಂಬಲವನ್ನು ಒದಗಿಸುವ ಯೋಜನೆಯನ್ನು ಸೂಚಿಸುತ್ತದೆ.
ರೆಸಲ್ಯೂಶನ್ ಫ್ರೇಮ್-ವರ್ಕ್ ಮತ್ತು ಹೆಲ್ತ್‌ಕೇರ್ ಸೆಕ್ಟರ್ ಕುರಿತು ಕಾಮತ್ ಸಮಿತಿಯು ಗುರುತಿಸಿದ ಕೋವಿಡ್ ಸಂಬಂಧಿತ ಸಂಕಷ್ಟಕ್ಕೆ ಗುರಿಯಾದ 26 ವಲಯಗಳಲ್ಲಿನ, 29.02.2020 ರ ಪ್ರಕಾರ ಎಲ್ಲಾ ಸಾಲದಾತ ಸಂಸ್ಥೆಗಳಲ್ಲಿ ಬಿಸಿನೆಸ್ ಉದ್ದೇಶಗಳಿಗಾಗಿ ಪಡೆದ ಲೋನ್‌ಗಳಲ್ಲಿ ₹ 50 ಕೋಟಿಗಿಂತ ಹೆಚ್ಚಿನ ಮತ್ತು ₹ 500 ಕೋಟಿಯವರೆಗಿನ ಒಟ್ಟು ಕ್ರೆಡಿಟ್ ಬಾಕಿ (ಫಂಡ್ ಆಧಾರಿತ ಮಾತ್ರ) ಹೊಂದಿರುವ ಬಿಸಿನೆಸ್ ಉದ್ಯಮಗಳು / MSME ಗಳಿಗೆ ECLGS 2.0 ಅನ್ವಯವಾಗುತ್ತದೆ.
ECLGS 2.0 (ವಿಸ್ತರಣೆ) ಎಂದರೆ ECLGS 2.0 ರ ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಅಥವಾ ಮಾರ್ಚ್ 31, 2021 ರ ಪರಿಷ್ಕೃತ ಉಲ್ಲೇಖ ದಿನಾಂಕದ ಆಧಾರದ ಮೇಲೆ ECLGS 2.0 ಅಡಿಯಲ್ಲಿ ಅರ್ಹರಾಗುವ ಹೊಸ ಸಾಲಗಾರರಿಗೆ ಹೆಚ್ಚುವರಿ ಬೆಂಬಲವನ್ನು ಒದಗಿಸುವ ಯೋಜನೆಯನ್ನು ಸೂಚಿಸುತ್ತದೆ.
ECLGS 3.0 ಆತಿಥ್ಯ ಮತ್ತು ಸಂಬಂಧಿತ ವಲಯಗಳಲ್ಲಿನ ಬಿಸಿನೆಸ್ ಉದ್ಯಮಗಳು/MSME ಗಳಿಗೆ - ಅಂದರೆ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು, ಮದುವೆ ಛತ್ರಗಳು, ಕ್ಯಾಂಟೀನ್‌ಗಳು ಇತ್ಯಾದಿ, ಪ್ರಯಾಣ ಮತ್ತು ಪ್ರವಾಸೋದ್ಯಮ, ಟ್ರಾವೆಲ್ ಏಜೆಂಟ್‌ಗಳು, ಟೂರ್ ಆಪರೇಟರ್‌ಗಳು, ಸಾಹಸ ಅಥವಾ ಹೆರಿಟೇಜ್ ಸೌಲಭ್ಯಗಳು, ವಿರಾಮ ಮತ್ತು ಕ್ರೀಡೆ, ಖಾಸಗಿ ಬಸ್ ನಿರ್ವಾಹಕರು, ಕಾರು ರಿಪೇರಿ ಸೇವೆಗಳು, ಬಾಡಿಗೆ-ಕಾರು ಸೇವೆ ಒದಗಿಸುವವರು, ಕಾರ್ಯಕ್ರಮ/ಕಾನ್ಫರೆನ್ಸ್ ಸಂಘಟಕರು, ಸ್ಪಾ ಕ್ಲಿನಿಕ್‌ಗಳು, ಬ್ಯೂಟಿ ಪಾರ್ಲರ್‌ಗಳು/ಸಲೂನ್‌ಗಳು, ಮೋಟಾರು ವಾಹನ ಸೌಲಭ್ಯ ಒದಗಿಸುವವರು, ಸಿನಿಮಾ ಹಾಲ್‌ಗಳು, ಈಜುಕೊಳಗಳು, ಮನರಂಜನಾ ಪಾರ್ಕ್‌ಗಳು, ಥಿಯೇಟರ್‌ಗಳು, ಬಾರ್‌ಗಳು, ಆಡಿಟೋರಿಯಂ, ಯೋಗ ಕೇಂದ್ರಗಳು, ವ್ಯಾಯಾಮಶಾಲೆಗಳು, ಇತರ ಫಿಟ್‌ನೆಸ್ ಕೇಂದ್ರಗಳು, ಕೇಟರಿಂಗ್ ಅಥವಾ ಅಡುಗೆಯಲ್ಲಿ ತೊಡಗಿರುವ ಘಟಕ/ವ್ಯಕ್ತಿಗಳು ಮತ್ತು ಪುಷ್ಪೋದ್ಯಮ ಪ್ರಾಡಕ್ಟ್‌ಗಳು, ಮತ್ತು ನಾಗರಿಕ ವಿಮಾನಯಾನ ವಲಯ- ಏರ್‌ಲೈನ್ಸ್ (ಶೆಡ್ಯೂಲ್ಡ್ ಮತ್ತು ನಾನ್-ಶೆಡ್ಯೂಲ್ಡ್ ವಿಮಾನಯಾನ ಸಂಸ್ಥೆಗಳು, ಚಾರ್ಟರ್ಡ್ ಫ್ಲೈಟ್ ಆಪರೇಟರ್‌ಗಳು, ಏರ್ ಆಂಬ್ಯುಲೆನ್ಸ್‌ಗಳು ಸೇರಿದಂತೆ), ವಿಮಾನ ನಿಲ್ದಾಣಗಳು, ಗ್ರೌಂಡ್ ನಿರ್ವಹಣೆ ಮತ್ತು ಸಪ್ಲೈ ಚೈನ್‌ನಂಥ ವಾಯುಯಾನ ಸಹಾಯಕ ಸೇವೆಗಳಿಗೆ ಅನ್ವಯಿಸುತ್ತದೆ.
ECLGS 3.0(ವಿಸ್ತರಣೆ) ಎಂದರೆ ECLGS 3.0 ರ ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಅಥವಾ ಮಾರ್ಚ್ 31, 2021 ಅಥವಾ ಜನವರಿ 31, 2022 ರ ಪರಿಷ್ಕೃತ ಉಲ್ಲೇಖ ದಿನಾಂಕದ ಆಧಾರದ ಮೇಲೆ ECLGS 3.0 ಅಡಿಯಲ್ಲಿನ ಹೊಸ ಸಾಲಗಾರರಿಗೆ ಹೆಚ್ಚುವರಿ ಬೆಂಬಲವನ್ನು ಒದಗಿಸುವ ಯೋಜನೆಯನ್ನು ಸೂಚಿಸುತ್ತದೆ.
ECLGS 4.0 ಆಸ್ಪತ್ರೆಗಳು/ನರ್ಸಿಂಗ್ ಹೋಮ್‌ಗಳು/ಕ್ಲಿನಿಕ್‌ಗಳು/ವೈದ್ಯಕೀಯ ಕಾಲೇಜುಗಳನ್ನು ನಡೆಸುವ ಸಾಲಗಾರರಿಗೆ ಮತ್ತು ಆನ್ ಸೈಟ್ ಆಕ್ಸಿಜನ್ ಉತ್ಪಾದನೆಗೆ ಕಡಿಮೆ ವೆಚ್ಚದ ತಂತ್ರಜ್ಞಾನಗಳನ್ನು ಸ್ಥಾಪಿಸಲು ₹ 2 ಕೋಟಿಯವರೆಗಿನ ಸಹಾಯದ ಅಗತ್ಯವಿರುವವರಿಗೆ ಅನ್ವಯವಾಗುತ್ತದೆ.
ಘಟಕವು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಪಡೆದ ಯಾವುದೇ ಕ್ರೆಡಿಟ್ ಸೌಲಭ್ಯಗಳು ECLGS 1.0, 2.0 ಮತ್ತು 3.0 ರ ಪ್ರಕಾರ ಮತ್ತು 31 ನೇ ಮಾರ್ಚ್ 2021 ರ ಪರಿಷ್ಕೃತ ಉಲ್ಲೇಖಿತ ದಿನಾಂಕ ಆಧರಿಸಿ ECLGS 1.0 (ವಿಸ್ತರಣೆ), 2.0 (ವಿಸ್ತರಣೆ) ರಲ್ಲಿ ಮತ್ತು 3.0 (ವಿಸ್ತರಣೆ) s.t. ECLGS 1.0, 2.0 ಮತ್ತು 3.0 ರ ಅಡಿಯಲ್ಲಿ ಕ್ರಮವಾಗಿ 31 ನೇ ಮಾರ್ಚ್ 2021 ಅಥವಾ 31 ನೇ ಜನವರಿ 2022 ರ ಪರಿಷ್ಕೃತ ಉಲ್ಲೇಖಿತ ದಿನಾಂಕ ಆಧರಿಸಿ ಫೆಬ್ರವರಿ 29, 2020 ರಂದು 60 ದಿನಗಳಿಗಿಂತ ಹೆಚ್ಚು ದಿನದಿಂದ ಬಾಕಿ ಇರಬಾರದು ಮತ್ತು ECLGS 4.0 ರಲ್ಲಿ ಮಾರ್ಚ್ 31, 2021 ರ ಪ್ರಕಾರ 90 ದಿನಗಳಿಗಿಂತ ಹೆಚ್ಚು ದಿನದಿಂದ ಬಾಕಿ ಇರಬಾರದು.
ಪಾಲಿಸಿಯ ಪ್ರಮುಖ ಮುಖ್ಯಾಂಶಗಳು
- ಈ ಯೋಜನೆ 31.03.2023 ರಂದು ಅಥವಾ ಅದಕ್ಕಿಂತ ಮೊದಲು ಮಂಜೂರಾಗುವ ಅಪ್ಲಿಕೇಶನ್‌ಗಳಿಗೆ ಅಥವಾ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಅಡಿಯಲ್ಲಿ ಭಾರತ ಸರ್ಕಾರವು ನಿಗದಿಪಡಿಸಿದ ಮಿತಿಯನ್ನು ತಲುಪುವುದು, ಯಾವುದು ಮೊದಲೋ ಅದಕ್ಕೆ ಲಭ್ಯವಿರುತ್ತದೆ.
- ಈ ಯೋಜನೆಯಡಿ ವಿತರಣೆಯ ಕೊನೆಯ ದಿನಾಂಕ ಜೂನ್ 30, 2023 ಆಗಿರುತ್ತದೆ.
- ನೋಂದಣಿ ಕಡ್ಡಾಯವಾಗಿರುವಲ್ಲಿ ಬಿಸಿನೆಸ್ ಉದ್ಯಮಗಳು / MSME ಸಾಲಗಾರರು GST ನೋಂದಣಿಯಾಗಿರಬೇಕು.
- ಈ ಯೋಜನೆಯಡಿ ಟಾಪ್ ಅಪ್ ಸೌಲಭ್ಯದ ಮಂಜೂರಾತಿ ಮತ್ತು ವಿತರಣೆಯ ಸಮಯದಲ್ಲಿ ಸಾಲಗಾರರ ಅಕೌಂಟ್ 90 DPD ಗಿಂತ ಹೆಚ್ಚಿರಬಾರದು.
- ECLGS 1.0 ಯೋಜನೆಯು ಹೊರಗುಳಿಯುವ ಆಯ್ಕೆಯನ್ನು ಹೊಂದಿರುತ್ತದೆ ಮತ್ತು ಸಾಲಗಾರರು ಈ ಸೌಲಭ್ಯವನ್ನು ಪಡೆಯದಿರುವ ನಿರ್ಧಾರ ಮಾಡಬಹುದು. ಆದಾಗ್ಯೂ ECLGS 2.0, ECLGS 3.0 & ECLGS 4.0 ಹೊರಗುಳಿಯುವ ಆಯ್ಕೆ ನೀಡುವುದಿಲ್ಲ.
- ECLGS ಅಡಿಯಲ್ಲಿ ನಿಧಿಯ ಮೊತ್ತವು ECLGS 1.0 ಮತ್ತು ECLGS 2.0 ಅಡಿಯಲ್ಲಿ ಗರಿಷ್ಠ 20% ವರೆಗೆ ಇರುತ್ತದೆ ಮತ್ತು 29 ನೇ ಫೆಬ್ರವರಿ 2020 ರ ಪ್ರಕಾರ ಒಟ್ಟು ಬಾಕಿಯಿರುವ ECLGS 3.0 ರ ಅಡಿಯಲ್ಲಿ ಪ್ರತಿ ಸಾಲಗಾರರಿಗೆ ₹ 200 ಕೋಟಿಗಳ ಮಿತಿಗೆ ಒಳಪಟ್ಟು 50% ವರೆಗೆ ಇರುತ್ತದೆ; ಇದು ಸಾಲಗಾರರು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವುದಕ್ಕೆ ಮತ್ತು ಕಂಪನಿಯ ಸಾಲ ನೀಡುವ ಮಾನದಂಡಗಳ ಪ್ರಕಾರ ಕ್ರೆಡಿಟ್ ಮೌಲ್ಯಮಾಪನ ಮತ್ತು ಪರಿಶೀಲನೆಗೆ ಒಳಪಟ್ಟಿರುತ್ತದೆ. ECLGS 3.0 ಅಡಿಯಲ್ಲಿ ಅರ್ಹರಾಗಿರುವ ಮತ್ತು ಈಗಾಗಲೇ ECLGS 1.0 ಅಥವಾ ECLGS 2.0 ಅಡಿಯಲ್ಲಿ ಪ್ರಯೋಜನವನ್ನು ಪಡೆದಿರುವ ಸಾಲಗಾರರು 29.02.2020 ರಂತೆ ಅವರ ಒಟ್ಟು ಕ್ರೆಡಿಟ್ ಬಾಕಿಯ 20% ವರೆಗೆ ಹೆಚ್ಚುವರಿ ಕ್ರೆಡಿಟ್‌ಗೆ ಅರ್ಹರಾಗಬಹುದು.
- ECLGS 1.0(ವಿಸ್ತರಣೆ) ಮತ್ತು ECLGS 2.0(ವಿಸ್ತರಣೆ) ಅಡಿಯಲ್ಲಿ, ಅಸ್ತಿತ್ವದಲ್ಲಿರುವ ECLGS 1.0 ಅಥವಾ 2.0 ಸಾಲಗಾರರಿಗೆ ಅಥವಾ ಹೊಸ ಸಾಲಗಾರರಿಗೆ ಹೆಚ್ಚುವರಿ ಲೋನ್ ಸೌಲಭ್ಯದ ರೂಪದಲ್ಲಿ ಲಭ್ಯವಿರುವ GECL ಫಂಡಿಂಗ್ ಮೊತ್ತವು, ಆಯಾ ಯೋಜನೆಯ ಘಟಕಗಳ ಪ್ರಕಾರ ಸಾಲಗಾರರ ಎಲ್ಲಾ ಅರ್ಹತಾ ಮಾನದಂಡಗಳ ಪಾಲನೆಗೆ ಒಳಪಟ್ಟು, 29 ಫೆಬ್ರವರಿ, 2020 ಅಥವಾ 31 ಮಾರ್ಚ್ 2021 ರ ಒಟ್ಟು ಬಾಕಿಯಲ್ಲಿ (ಪಡೆದ ಸಹಾಯದ ನಿವ್ವಳ) ಯಾವುದು ಅಧಿಕವೋ ಅದರ 30% ವರೆಗೆ ಇರುತ್ತದೆ. ECLGS 3.0 (ವಿಸ್ತರಣೆ) ಅಡಿಯಲ್ಲಿ, ವಿಮಾನಯಾನ ವಲಯವನ್ನು ಹೊರತುಪಡಿಸಿದ ಪ್ರತಿ ಸಾಲಗಾರರಿಗೆ ₹ 200 ಕೋಟಿ ಮತ್ತು ವಿಮಾನಯಾನ ವಲಯದ ಪ್ರತಿ ಸಾಲಗಾರರಿಗೆ ₹ 400 ಕೋಟಿ ಎಂಬ ಮಿತಿಗೆ ಒಳಪಟ್ಟು, ಅರ್ಹ ಸಾಲಗಾರರಿಗೆ ಸಿಗುವ GECL ಫಂಡಿಂಗ್ ಮೊತ್ತವು 29.02.2020 ಅಥವಾ 31.03.2021 ಅಥವಾ 31.01.2022 ರ ಬಾಕಿ ಕ್ರೆಡಿಟ್‌ನಲ್ಲಿ (ಫಂಡ್ ಆಧಾರಿತ ಮಾತ್ರ) ಯಾವುದು ಅಧಿಕವೋ ಅದರ 50% ಆಗಿರುತ್ತದೆ.
ECLGS 4.0 ಅಡಿಯಲ್ಲಿ, ಕಡಿಮೆ ವೆಚ್ಚದ ಆನ್-ಸೈಟ್ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರತಿ ಸಾಲಗಾರರಿಗೆ ಸಿಗುವ ಫಂಡಿಂಗ್ ₹ 2 ಕೋಟಿಗೆ ಸೀಮಿತವಾಗಿರುತ್ತದೆ.
- ಮೊದಲ ವಿತರಣೆಯ ದಿನಾಂಕದಿಂದ ಹೊಸ ಲೋನ್‌ಗಳ ಒಟ್ಟು ಡೋರ್ ಟು ಡೋರ್ ಅವಧಿಯು ECLGS 1.0 ರಲ್ಲಿ 12 ತಿಂಗಳ ಪ್ರಿನ್ಸಿಪಲ್ ಮೊರಟೋರಿಯಂ ಜೊತೆಗೆ 48 ತಿಂಗಳುಗಳು, ECLGS 1.0 (ವಿಸ್ತರಣೆ) ರಲ್ಲಿ 24 ತಿಂಗಳ ಪ್ರಿನ್ಸಿಪಲ್ ಮೊರಟೋರಿಯಂನೊಂದಿಗೆ 60 ತಿಂಗಳುಗಳು, ECLGS 2.0 ರಲ್ಲಿ 12 ತಿಂಗಳ ಪ್ರಿನ್ಸಿಪಲ್ ಮೊರಟೋರಿಯಂನೊಂದಿಗೆ 60 ತಿಂಗಳುಗಳು, ECLGS 2.0 (ವಿಸ್ತರಣೆ) ರಲ್ಲಿ 24 ತಿಂಗಳ ಪ್ರಿನ್ಸಿಪಲ್ ಮೊರಟೋರಿಯಂನೊಂದಿಗೆ 72 ತಿಂಗಳುಗಳು, ECLGS 3.0 ಮತ್ತು ECLGS 3.0 (ವಿಸ್ತರಣೆ) ಅಡಿಯಲ್ಲಿ 24 ತಿಂಗಳ ಪ್ರಿನ್ಸಿಪಲ್ ಮೊರಟೋರಿಯಂನೊಂದಿಗೆ 72 ತಿಂಗಳುಗಳು ಮತ್ತು ECLGS 4.0 ಅಡಿಯಲ್ಲಿ 6 ತಿಂಗಳ ಪ್ರಿನ್ಸಿಪಲ್ ಮೊರಟೋರಿಯಂನೊಂದಿಗೆ 60 ತಿಂಗಳುಗಳು ಆಗಿವೆ. ಮೊರಟೋರಿಯಂ ಅವಧಿಯಲ್ಲಿ ಮಾಸಿಕ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
- ಈ ಲೋನ್‌ಗಳಿಗೆ ಯಾವುದೇ ಪ್ರಕ್ರಿಯಾ ಶುಲ್ಕವನ್ನು ವಿಧಿಸಲಾಗುವುದಿಲ್ಲ.
- ಬಡ್ಡಿ ದರವು ವಿವಿಧ ಅಂಶಗಳನ್ನು ಅವಲಂಬಿಸಿರುತ್ತದೆ, ಆದರೆ ಆಯಾ ಯೋಜನೆಗಳಿಗೆ ಮಾರ್ಗಸೂಚಿಗಳಲ್ಲಿ ಸೂಚಿಸಲಾದ ಗರಿಷ್ಠ ಬಡ್ಡಿ ದರವನ್ನು ಮೀರುವುದಿಲ್ಲ.
- ಕಾಲಾವಧಿ ಮುಗಿಯುವ ಮೊದಲು ಮುಂಗಡ ಪಾವತಿ ಸೌಲಭ್ಯಗಳನ್ನು ಪಡೆದ ಸಂದರ್ಭದಲ್ಲಿ ಈ ಲೋನ್‌ಗಳಿಗೆ ಯಾವುದೇ ಮುಂಗಡ ಪಾವತಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.
- ಯಾವುದೇ ಹೆಚ್ಚುವರಿ ಅಡಮಾನದ ಅಗತ್ಯವಿಲ್ಲ ಮತ್ತು ಈಗಾಗಲೇ ಒದಗಿಸಲಾದ ಭದ್ರತೆಗಳ ಮೇಲೆ ಹಕ್ಕುಗಳನ್ನು ವಿಸ್ತರಿಸುವ ಮೂಲಕ ಹೆಚ್ಚುವರಿ ಹಣವನ್ನು ಕವರ್ ಮಾಡಲಾಗುತ್ತದೆ.
- ಲೋನ್ ಒಪ್ಪಂದದಲ್ಲಿನ ಇತರ ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ
ECLGS ಬಗ್ಗೆ ವಿವರವಾದ ಮಾರ್ಗಸೂಚಿಗಳು ಮತ್ತು FAQ ಗಳಿಗಾಗಿ, https://www.eclgs.com/ ಗೆ ಭೇಟಿ ನೀಡಿ
ಹಕ್ಕು ನಿರಾಕರಣೆ:
ಯೋಜನೆಯ ಮಾರ್ಗಸೂಚಿಗಳ ಒಳಗೆ ಅರ್ಹ ಸಾಲಗಾರರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿದೆ.
ಸಾಲಗಾರರು ಸೂಕ್ತ ವಿಧಾನದ ಮೂಲಕ ಲೋನ್‌ಗೆ ಅಪ್ಲೈ ಮಾಡಬೇಕು ಮತ್ತು ಡಾಕ್ಯುಮೆಂಟೇಶನ್ ಪೂರ್ಣಗೊಳಿಸಬೇಕು ಮತ್ತು ಲೋನ್‌ನ ಪ್ರಕ್ರಿಯೆಗೆ ಅಗತ್ಯ ಮಾಹಿತಿಯನ್ನು ಒದಗಿಸಬೇಕು.
ಕಂಪನಿಯು ಆಸಕ್ತ ಸಾಲಗಾರರು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸುತ್ತದೆ ಮತ್ತು ಸಾಲಗಾರರ ಕ್ರೆಡಿಟ್ ಮತ್ತು ಅಪಾಯದ ಮಾನದಂಡಗಳು ಮತ್ತು ಇತರ ಯಾವುದೇ ಸಂಬಂಧಿತ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ.
ಅಂತಿಮ ನಿರ್ಧಾರ ಅಥವಾ ಲೋನ್ ಮೊತ್ತ ಮತ್ತು ಲೋನ್‌ನ ನಿಯಮಗಳು ಸರಿಯಾದ ಮೌಲ್ಯಮಾಪನ, ಸೂಕ್ತ ಕ್ರಮ ಮತ್ತು ಪರಿಶೀಲನೆಗಳ ನಂತರ ಬದಲಾಗಬಹುದು